ಚಿಕ್ಕಮಗಳೂರು : ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಸ್ಕೂಲ್ ಸಪ್ತಾಹದ ಅಂಗವಾಗಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಎಲ್.ಚೇತನ ಪ್ರಥಮ ಸ್ಥಾನ ಗಳಿಸಿದ್ದಾನೆ.
ನದೀಂ ದ್ವಿತೀಯ, ಯಶೋಧ ತೃತೀಯ ಚರ್ಚಾ ಸ್ಪರ್ಧೆಯಲ್ಲಿ ಅಶ್ವಿನ್ ಪ್ರಥಮ, ಸಿದ್ದಿಕ್ ದ್ವಿತೀಯ, ಸಂತೋಷ್ ತೃತೀಯ ಭಿತ್ತಿಪತ್ರ ಬರೆಯುವ ಸ್ಪರ್ಧೆಯಲ್ಲಿ ಲಿಖಿತ್ ಪ್ರಥಮ, ರಕ್ಷಿತ್ ದ್ವಿತೀಯ ಹಾಗೂ ಮದನ್ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಬಂಧ ಸ್ಪರ್ಧೆಯಲ್ಲಿ ಸಾದಿಯಾ ಪ್ರಥಮ, ಯಶ್ವಂತ್ ದ್ವಿತೀಯ, ಫೌಜಿಯ ತೃತೀಯ, ರಸಪ್ರಶ್ನೆಯಲ್ಲಿ ಸುಹೀಲ್ ಪ್ರಥಮ, ತಬುಸಂ ದ್ವಿತೀಯ, ಚಿದಾನಂದ ತೃತೀಯ ಹಾಗೂ ಕ್ರೀಡಾ ವಿಭಾಗದಲ್ಲಿ ಸತೀಶ್ ಪ್ರಥಮ, ಸುಮಂತ್ ದ್ವಿತೀಯ, ಆದೀಶ್ ತೃತೀಯ ಸ್ಥಾನ ಗಳಿಸಿದ್ದಾರೆ.
ಶಾಲೆಯಲ್ಲಿ ಶನಿವಾರ ನಡೆದ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು, ಶಿಕ್ಷಕರಾದ ಎಸ್.ಈ.ಲೋಕೇಶ್ವರಾಚಾರ್, ನಾಗವೇಣಿ, ಜಯಂತಿ, ಸಾವಿತ್ರಮ್ಮ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಸ್ಕೂಲ್ ಸಪ್ತಾಹದ ಅಂಗವಾಗಿ ನಡೆದ ಯೋಗಾಸನ ಸ್ಪರ್ಧೆಯ...










