ಚಿಕ್ಕಮಗಳೂರು : ಕೊಲ್ಲಾಪುರದಮ್ಮನವರ ದೇವಾಲಯದಲ್ಲಿ ರಾಜಗೋಪುರ ಉದ್ಘಾಟನೆ…

114
firstsuddi

ಚಿಕ್ಕಮಗಳೂರು : ನಗರದ ದೋಣಿಖಣದ ಶ್ರೀ ಕೊಲ್ಲಾಪುರದಮ್ಮನವರ ದೇವಾಲಯದ ರಾಜಗೋಪುರ ಉದ್ಘಾಟನೆಯ ಧಾರ್ಮಿಕ ವಿಧಿವಿಧಾನಗಳು ಭರದಿಂದ ಸಾಗಿದ್ದು, ರಾಜ ಗೋಪುರದಲ್ಲಿ ಪ್ರತಿಷ್ಠಾಪಿಸಲಾಗುವ ಕಳಸಗಳಿಗೆ ಇಂದು ಅಭಿಷೇಕ, ವಿಶೇಷ ಪೂಜೆ, ನಡೆದವು.

ಶೃಂಗೇರಿ ಶಾರದಾ ಪೀಠದ ವಿದ್ವಾಂಸ ಶಿವಕುಮಾರ ಶವರ್i ಅವರ ನೇತೃತ್ವದ ಋತ್ವಿಜರ ತಂಡ ಬೆಳಗ್ಗೆ ಸಪ್ತಶತೀ ಪಾರಾಯಣ, ಶಾಂತಿ ಹೋಮ, ಚಂಡಿಕಾ ಹೋಮ ನೆರವೇರಿಸಿತು.

ಹೋಮದ ಪೂರ್ಣಾಹುತಿಯ ನಂತರ ಅಷ್ಟೋತ್ತರ ಶತ ಕಳಸಗಳ ಸ್ಥಾಪನೆ, ಆದಿವಾಸ ಹೋಮ, ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು. ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪೂಜೆ ಪ್ರಾರ್ಥನೆ ಸಲ್ಲಿಸಿದರು.