ಚಿಕ್ಕಮಗಳೂರು : ಚಿಕ್ಕಪ್ಪನ ತಿಥಿ ಕಾರ್ಯಕ್ಕೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ಸಾವು…

646
firstsuddi

ಚಿಕ್ಕಮಗಳೂರು : ಚಿಕ್ಕಪ್ಪನ ತಿಥಿ ಕಾರ್ಯಕ್ಕೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಉದ್ದೇಬೋರನಹಳ್ಳಿ ಬಳಿ ನಡೆದಿದೆ. ಬಾಳೇನಹಳ್ಳಿ ಗ್ರಾಮದ ಚಿದಾನಂದ್(27) ಮೃತ ಯೋಧ ಎಂದು ಗುರುತಿಸಲಾಗಿದ್ದು, ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧ ಚಿದಾನಂದ್ ಅವರು ಕಳೆದ ಎರಡು ದಿನಗಳ ಹಿಂದೆ ಚಿಕ್ಕಪ್ಪನ ತಿಥಿ ಕಾರ್ಯಕ್ಕೆ ಬಂದಿದ್ದು, ಮೊನ್ನೆ ಬೈಕ್‍ನಲ್ಲಿ ಸಖರಾಯಪಟ್ಟಣದಿಂದ ಬಾಳೇನಹಳ್ಳಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಅಪಘಾತ ಸಂಭವಿಸಿ ಕಿರು ಸೇತುವೆಯ ಕೆಳಗೆ ಬಿದ್ದಿದ್ದ ಯೋಧನ ಮೃತದೇಹ 20 ಗಂಟೆ ಬಳಿಕ ಪೊಲೀಸ್ ನೆಟ್‍ವರ್ಕ್ ತನಿಖೆಯಿಂದ ಪತ್ತೆಯಾಗಿದ್ದು, ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.