ಚಿಕ್ಕಮಗಳೂರು : ಜಿ ಟಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಮೈಸೂರಿನಲ್ಲಿ ಒಟ್ಟಿಗೆ ಪ್ರಚಾರ ಸಭೆ ನಡೆಸುತ್ತಾರೆ : ಹೆಚ್.ಡಿ. ಕುಮಾರಸ್ವಾಮಿ…

197
firstsuddi

ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪದಲ್ಲಿ ಚುನಾವಣಾ ಪ್ರಚಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಜಿ.ಟಿ. ದೇವೇಗೌಡ ಅವರ ಸಮ್ಮುಖದಲ್ಲಿ ನಡೆಯುತ್ತಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತಿನ ಚಕಮಕಿ ಹಾಗೂ ಮೋದಿಗೆ ಜೈಕಾರ ಕೂಗಿದ ಘಟನೆಗೆ ಪ್ರತಿಕ್ರಯಿಸಿದ್ದು, ಆ ಸಭೆಯಲ್ಲಿ ಬಿಜೆಪಿಯ ವ್ಯವಸ್ಥಿತ ಗುಂಪು ಬಂದು ಮೋದಿಗೆ ಜೈ ಎಂದಿರಬಹುದು. ಇದನ್ನು ದೊಡ್ಡದಾಗಿ ಬಿಂಬಿಸಿ ಗಾಬರಿ ಆಗಬೇಕಿಲ್ಲ. ಮೈಸೂರಿನಲ್ಲಿ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು ಒಂದಾಗಿ ಮೈತ್ರಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಾರೆ.ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ನಾನು ಕಾರಣ ಅಲ್ಲ ಎಂಬ ಜಿ ಟಿ ದೇವೇಗೌಡ ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಇದಕ್ಕೆ ಅನುಮಾನ ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಜಿ ಟಿ ದೇವೇಗೌಡ ಅವರು ಸಿದ್ದರಾಮಯ್ಯ ಅವರನ್ನು ನೇರವಾಗಿ ಸಂಪರ್ಕಿಸಿ ಮಾತನಾಡಿದ್ದಾರೆ. ಜಿ ಟಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಒಟ್ಟಿಗೆ ಪ್ರಚಾರ ಸಭೆ ನಡೆಸುತ್ತಾರೆ ಎಂದು ಹೇಳೀದ್ದಾರೆ.