ಚಿಕ್ಕಮಗಳೂರು : ಡಿಗ್ರೂಪ್ ನೌಕರನ ಮೇಲೆ ಹಲ್ಲೆ ನಡೆಸಿದ ಕಡೂರು ತಹಶೀಲ್ದಾರ್ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಎಸ್‍ಪಿಯಿಂದ ಜಿಲ್ಲಾಡಳಿತಕ್ಕೆ ಒತ್ತಾಯ…

355
firstsuddi

ಚಿಕ್ಕಮಗಳೂರು : ಡಿಗ್ರೂಪ್ ನೌಕರನ ಮೇಲೆ ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ಕಡೂರು ತಹಶೀಲ್ದಾರ್ ವಿರುದ್ಧ ಕ್ರಮಕೈಗೊಳ್ಳುವಂತೆ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿ ಡಾ|ಕೆ.ಕುಮಾರ್ ಅವರನ್ನು ಬೇಟಿಮಾಡಿದ ಸಮಿತಿ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಕಡೂರು ತಾಲ್ಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಕಾರ್ಯ ನಿರ್ವಹಿಸುವ ಪರಿಶಿಷ್ಟ ವರ್ಗದ ಡಿಗ್ರೂಪ್ ನೌಕರ ಆರ್.ನವೀನ್ ಕುಮಾರ್ ಅವರ ಮೇಲೆ ತಹಶೀಲ್ದಾರ್ ಅವರು ಇತ್ತೀಚೆಗೆ ಅವಚ್ಛ್ಯ ಶಬ್ಧಗಳಿಂದ ನಿಂದಿಸುವುದರ ಜೊತೆಗೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದು, ಅಸ್ವಸ್ಥನಾಗಿದ್ದ ನವೀನ್ ಕುಮಾರ್ ಅವರನ್ನು ಚಿಕ್ಕಮಗಳೂರಿನ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿಸಿದರು.
ಈ ಸಂಬಂಧ ಪೊಲೀಸ್ ಇಲಾಖೆಗೆ ದೂರು ಸಹ ನೀಡಲಾಗಿದೆ. ಆದರೂ, ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದ ಪದಾಧಿಕಾರಿಗಳು ತಹಶೀಲ್ದಾರ್ ಅವರು ನವೀನ್ ಕುಮಾರ್ ದಲಿತನಾಗಿರುವ ಹಿನ್ನೆಲೆಯಲ್ಲಿ ಆಗಾಗ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಹುಜನ ಸಮಾಜ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಎಚ್.ಜಗದೀಶ್, ಕಾರ್ಯಾದರ್ಶಿ ಪಿ.ಎಂ.ನಾರಾಯಣ ಮೂರ್ತಿ, ಸದಸ್ಯರಾದ ಆರ್. ಲಕ್ಷ್ಮಣ್, ರೇಖಾ, ನವೀನ್‍ಕುಮಾರ್ ಅವರ ಸಹೋದರಿ ಲತಾ ಹಾಜರಿದ್ದರು.