ಚಿಕ್ಕಮಗಳೂರು : ರಿಪ್ಪನ್‍ಪೇಟೆಯಲ್ಲಿ ಇತ್ತೀಚೆಗೆ ನಡೆದ ಯೋಗ ಪಂದ್ಯಾವಳಿಯಲ್ಲಿ ಐಡಿಎಸ್‍ಜಿ ಕಾಲೇಜಿನ ಮಹಿಳಾ ತಂಡಕ್ಕೆ ಸಮಗ್ರ ಪ್ರಶಸ್ತಿ…

380
firstsuddi

ಚಿಕ್ಕಮಗಳೂರು : ರಿಪ್ಪನ್‍ಪೇಟೆಯಲ್ಲಿ ಇತ್ತೀಚೆಗೆ ನಡೆದ ಕುವೆಂಪು ವಿಶ್ವವಿದ್ಯಾನಿಲಯದ ಅಂತರಕಾಲೇಜು ಯೋಗ ಪಂದ್ಯಾವಳಿಯಲ್ಲಿ ನಗರದ ಐಡಿಎಸ್‍ಜಿ ಕಾಲೇಜಿನ ಮಹಿಳಾ ತಂಡ ಸಮಗ್ರ ಪ್ರಶಸ್ತಿ ಗಳಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪುರುಷರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ, ಕಾಲೇಜಿನ ವಿದ್ಯಾರ್ಥಿಗಳಾದ ಎನ್.ಎಂ.ಭಾನುಪ್ರಿಯ, ಹೆಚ್.ಪಿ.ಹರಿಣಿ, ಹೆಚ್.ಎ.ಪೂಜಾ, ವೈ.ಎಂ.ಪೂಜಾ, ಆರ್.ಎಂ.ಉದಯ ಪ್ರಸಾದ್, ಜನವರಿ 6 ರಂದು ಆಂಧ್ರಪ್ರದೇಶದಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯದ ಯೋಗ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ದೈಹಿಕ ಶಿಕ್ಷಕ ಬಿ.ಯೋಗೀಶ್ ತಿಳಿಸಿದ್ದಾರೆ.