ಚಿಕ್ಕಮಗಳೂರು: ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾಗಿ ಎಂ ಶಾಂತರಾಮ್ ಹೆಗಡೆ ಆಯ್ಕೆ…

43
firstsuddi

ಚಿಕ್ಕಮಗಳೂರು: ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ(ಚೇಂಬರ್‍ಆಫ್‍ಕಾಮರ್ಸ್) ಅಧ್ಯಕ್ಷರಾಗಿ ಎಂ ಶಾಂತರಾಮ್ ಹೆಗಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಎಸ್‍ಎನ್ ವೆಂಕಟೇಶ್ ಪರಮೇಶ್, ಕಾರ್ಯದರ್ಶಿಯಾಗಿ ಟಿ ಕೆ ಕಾರ್ತಿಕ್‍ಕುಮಾರ್, ಖಜಾಂಚಿಯಾಗಿ ಜೆಎಸ್ ಶಿವಣ್ಣ ಹಾಗೂ ನಿರ್ದೇಶಕರಾಗಿ ಹತ್ತು ಜನ ಆಯ್ಕೆಯಾಗಿದ್ದಾರೆ.

ನಗರದ ಸಂಸ್ಥೆಯ ಕಚೇರಿಯಲ್ಲಿ ಚೇಂಬರ್‍ಆಫ್‍ಕಾಮರ್ಸ್ ಅಧ್ಯಕ್ಷ ಆರ್‍ಎಂ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.