ಚಿಕ್ಕಮಗಳೂರು : ವಿದ್ಯುತ್ ತಂತಿ ತಗುಲಿ ಕಾಡುಕೋಣ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಸ್ರಿಕಟ್ಟೆಯಲ್ಲಿ ನಡೆದಿದೆ. ಕಾಫಿತೋಟದಿಂದ ನಿರ್ಗಮಿಸುವ ಸಂದರ್ಭದಲ್ಲಿ ಜೋತುಬಿದ್ದಿದ್ದ ವಿದ್ದುತ್ ತಂತಿ ತಗುಲಿ ಕಾಡುಕೋಣ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಳೆದ ಒಂದುವರೆ ತಿಂಗಳ ಹಿಂದೆ ಕೂಡಾ ವಿದ್ಯುತ್ ತಂತಿ ತಗುಲಿ ಕಾಡುಕೋಣ ಸಾವನ್ನಪ್ಪಿತ್ತು. ಪದೇ ಪದೇ ಅವಘಡ ಸಂಭವಿಸುತ್ತಿದ್ದರೂ ಮೆಸ್ಕಾಂ ಸಿಬ್ಬಂದಿಗಳು ಎಚ್ಚೆತ್ತುಕೊಳ್ಳದೆ ಸುಮ್ಮನಿದ್ದು, ಕೂಡಲೇ ವಿದ್ಯುತ್ ಲೈನ್ ದುರಸ್ತಿಗೊಳಿಸಿ ಜನರ ಹಾಗೂ ಪ್ರಾಣಿಗಳನ್ನು ರಕ್ಷಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.











