ಚಿಕ್ಕಮಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ…

58
firstsuddi

ಚಿಕ್ಕಮಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ನಿನ್ನೆ ಮನವಿ ಸಲ್ಲಿಸಿದರು.

ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶಹನಾಜ್ ಎಂಬುವರಿಗೆ ವಿತರಿಸಿರುವ ನಿವೇಶನವನ್ನು ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಅವರ ಮಗ ಉಮ್ಮರ್ ಅವರ ಹೆಸರಿಗೆ ಖಾತೆ ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಿದರು.

ನರಸಿಂಹರಾಜಪುರ ತಾಲೂಕಿನ ಗುಬ್ಬಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿದ್ದಯ್ಯ, ಗಿಡ್ಡಯ್ಯ ಮತ್ತು ರಂಗನಾಥ ಅವರುಗಳಿಗೆ ಸರ್ಕಾರದಿಂದ ನೀಡಿರುವ ಭೂಮಿ ಇದೀಗ ಅರಣ್ಯ ವ್ಯಾಪ್ತಿಗೆ ಸೇರಿರುವುದರಿಂದಾಗಿ ಅವರುಗಳಿಗೆ ಬೇರೆ ಜಾಗದಲ್ಲಿ ಭೂಮಿ ನೀಡುವಂತೆ ಒತ್ತಾಯಿಸಿದರು.

ನರಸಿಂಹರಾಜಪುರ ತಾಲೂಕಿನ ಕರ್ಕೇಶ್ವರ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು, ಶೃಂಗೇರಿ ಕ್ಷೇತ್ರಾಧ್ಯಕ್ಷ ಎಸ್. ಹನುಮಂತ, ಸಂಘಟನಾ ಸಂಚಾಲಕ ಪಿ.ಎ .ಜಾರ್ಜ್, ಶ್ರೀನಾಥ್, ವೈ.ಸಿ. ಸುಧಾಕರ, ನಾಗರಾಜ್, ಪವಿತ್ರ ಹಾಜರಿದ್ದರು.