ಚಿಕ್ಕಮಗಳೂರು : ಹಳ್ಳದಲ್ಲಿ ಈಜಲು ಹೋದ ಯುವಕ ಸಾವು…

667
firstsuddi

ಚಿಕ್ಕಮಗಳೂರು : ಹಳ್ಳದಲ್ಲಿ ಈಜಲು ತೆರಳಿದ್ದ ಯುವಕ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಇಟ್ಟಿಗೆ ಗ್ರಾಮದಲ್ಲಿ ನಡೆದಿದೆ. ಎ. ರಂಗಾಪುರ ನಿವಾಸಿ ಸಂದೀಪ್(18) ಮೃತ ಯುವಕ ಎಂದು ಗುರುತಿಸಲಾಗಿದ್ದು, ಸಂದೀಪ್ ಇಟ್ಟಿಗೆ ಸಮೀಪದ ಹಳ್ಳದಲ್ಲಿ ಈಜಲು ತೆರಳಿದ್ದ ವೇಳೆ ನೀರು ಹೆಚ್ಚಾಗಿದ್ದರಿಂದ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದು,  ಒಂದು ದಿನದ ಬಳಿಕ ಪೊಲೀಸರು ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.