ಚಿಕ್ಕಮಗಳೂರು : ಹೆಣ್ಣು ಮಗು ಎಂಬ ಕಾರಣಕ್ಕೆ 8 ತಿಂಗಳ ಪುಟ್ಟ ಮಗುವನ್ನು ಕೊಂದ ತಂದೆ…

341
firstsuddi

ಚಿಕ್ಕಮಗಳೂರು : ಹೆಣ್ಣು ಮಗು ಎಂಬ ಕಾರಣಕ್ಕೆ ತನ್ನ 8 ತಿಂಗಳ ಪುಟ್ಟ ಕಂದಮ್ಮನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದ ದೊಡ್ಡಪೇಟೆ ಬಡಾವಣೆಯಲ್ಲಿ ನಡೆದಿದೆ. ವಕೀಲ ಉಮಾಶಂಕರ್ ಮಗುವನ್ನು ಕೊಂದ ಪಾಪಿ ತಂದೆ. ತಂದೆ ಉಮಾಶಂಕರ್ ಮಗುವಿನ ಬಾಯಿಗೆ ಪ್ಲಾಸ್ಟರ್ ಹಾಕಿ ಬಳಿಕ ಬಕೆಟ್‍ನಲ್ಲಿದ್ದ ನೀರಿಗೆ ಮುಳುಗಿಸಿ ಹತ್ಯೆಗೈದಿದ್ದಾರೆ. ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಕಡೂರು ಪೊಲೀಸರು ಆರೋಪಿ ವಕೀಲ ಉಮಾಶಂಕರ್ ಅವರನ್ನು ಬಂಧಿಸಿದ್ದಾರೆ.