ಚೀನಾದಲ್ಲಿ ಭಾರತದ ವಿದ್ಯಾರ್ಥಿ ಸಾವು – ಮೃತದೇಹ ತರಲು ಸಹಾಯ ಮಾಡುವಂತೆ ಕುಟುಂಬಸ್ಥರ ಮನವಿ…

44
firstsuddi

ಚೆನ್ನೈ : ಚೀನಾದಲ್ಲಿ ಅನಾರೋಗ್ಯದಿಂದ ಭಾರತದ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದು, ಇದೀಗ ಯುವಕನ ಮೃತದೇಹ ತರಿಸಿಕೊಳ್ಳಲು ಆತನ ಕುಟುಂಬಸ್ಥರು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

ತಮಿಳುನಾಡು ಮೂಲದ ವಿದ್ಯಾರ್ಥಿ ಶೇಖ್ ಅಬ್ದುಲ್ (22) ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಕೊರೊನಾ ವೈರಸ್‍ನಿಂದಾಗಿ ತಮ್ಮ ಸ್ವಂತ ಊರಿನಲ್ಲಿ ಶಿಕ್ಷಣವನ್ನು ಆನ್‍ಲೈನ್ ನಲ್ಲಿ ಪೂರ್ಣಗೊಳಿಸಿದ್ದಾರೆ. ಆದರೆ ಡಿಸೆಂಬರ್ 11 ರಂದು ಕಿಕಿಹಾರ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಇಂಟರ್ನ್‌ಶಿಪ್‌ಗಾಗಿ ಚೀನಾಗೆ ಮತ್ತೆ ತೆರಳಬೇಕಾಯಿತು.

ಬಳಿಕ ಅವರು ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭ ಅನಾರೋಗ್ಯಕ್ಕೀಡಾದರು. ಅವರನ್ನು ತೀವ್ರ ನಿಗಾ ಘಟಕಕ್ಕೆ ಸೇರಿಸಲಾಯಿತು. ಆದರೆ ಶೇಖ್ ಅಬ್ದುಲ್ಲಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದೀಗ ಯುವಕನ ಮೃತದೇಹವನ್ನು ಭಾರತಕ್ಕೆ ಮರಳಿ ತರಿಸಿಕೊಳ್ಳಲು ಆತನ ಕುಟುಂಬಸ್ಥರು ಪರದಾಡುತ್ತಿದ್ದು, ಮೃತದೇಹವನ್ನು ಸ್ವದೇಶಕ್ಕೆ ತರಲು ಸಹಾಯ ಮಾಡುವಂತೆ ವಿದೇಶಾಂಗ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.