ಜಮೀನಿನಲ್ಲಿ ವಿದ್ಯುತ್ ಸ್ಪರ್ಶಿಸಿ ತಂದೆ, ಮಗಳು ಸಾವು…

73
firstsuddi

ತುಮಕೂರು: ಜಮೀನಿನಲ್ಲಿ ವಿದ್ಯುತ್ ಸ್ಪರ್ಶಿಸಿ ತಂದೆ ಹಾಗು ಮಗಳು ಸಾವನ್ನಪ್ಪಿರುವ ಘಟನೆ ಇಂದು ಜಿಲ್ಲೆಯ ಪಾವಗಡ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಬಸವನಹಳ್ಳಿಯ ರಾಮಕೃಷ್ಣ ರೆಡ್ಡಿ (65) ಹಾಗೂ ಮಗಳು ನಿರ್ಮಲ (45) ಎಂದು ಗುರುತಿಸಲಾಗಿದೆ. ರಾಮಕೃಷ್ಣ ರೆಡ್ಡಿ ಅವರು ಮಡಕಶಿರಾ ತಾಲೂಕಿನ ಎಲ್ಲೊಟಿಯಲ್ಲಿರುವ ತಮ್ಮ ಹೊಲದಲ್ಲಿ ನೀರು ಹಾಯಿಸಲು ತೆರಳಿದ್ದಾಗ ಕೊಳವೆ ಬಾವಿಯ ಬಳಿ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ. ತಂದೆ ಬರುವುದು ತಡವಾದ್ದರಿಂದ ಹೊಲಕ್ಕೆ ಹುಡುಕಿಕೊಂಡು ಬಂದ ಮಗಳೂ ಕೂಡ ತಂದೆಯನ್ನು ಮುಟ್ಟಿದ್ದಾರೆ. ಇದರಿಂದ ಅವರೂ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.