ಜಮ್ಮು ಕಾಶ್ಮೀರ ಕಾರಾಗೃಹ ಡಿಜಿಪಿ ಹೇಮಂತ್ ಲೋಹಿಯಾ ಭೀಕರ ಹತ್ಯೆ…

47
firstsuddi

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕಾರಾಗೃಹ ಡಿಜಿಪಿ ಹೇಮಂತ್ ಲೋಹಿಯಾ ಅವರನ್ನು ಅವರ ನಿವಾಸದಲ್ಲಿಯೇ ಕತ್ತು ಸೀಳಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

1992ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ 57 ವರ್ಷದ ಲೋಹಿಯಾ ಅವರನ್ನು ಕತ್ತು ಸೀಳಿ ಭಯಾನಕವಾಗಿ ಕೊಲೆ ಮಾಡಲಾಗಿದೆ. ಜಮ್ಮು ಹೊರವಲಯದ ಉದಯವಾಲದ ನಿವಾಸದಲ್ಲಿ ಈ ಘಟನೆ ನಡೆದಿದೆ. ಲಷ್ಕರ್ ಎ ತಯಬಾ ಉಗ್ರ ಸಂಘಟನೆಯ ಭಾರತದ ಘಟಕ ಪೀಪಲ್ಸ್ ಆಂಟಿ- ಫ್ಯಾಸಿಸ್ಟ್ ಫೋರ್ಸ್ (ಪಿಎಎಫ್ ಎಫ್) ಈ ಹತ್ಯೆಗೆ ಹೊಣೆ ಹೊತ್ತುಕೊಂಡಿದೆ.

ಈ ಕುರಿತು ಜಮ್ಮು ವಲಯದ ಎಡಿಜಿಪಿ ಮುಖೇಶ್ ಸಿಂಗ್ ಮಾತನಾಡಿ, ಕಾರಾಗೃಹದ ಡಿಜಿ ಹೇಮಂತ್ ಲೋಹಿಯಾ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಕೊಲೆ ರೀತಿ ಕಾಣುತ್ತದೆ. ಲೋಹಿಯಾ ಅವರ ಮನೆಯ ಕೆಲಸಗಾರ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ ಎಂದರು.

ಲೋಹಿಯಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಕಳುಹಿಸಲಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರ ಪ್ರವಾಸದಲ್ಲಿರುವ ಸಂದರ್ಭದಲ್ಲಿಯೇ ಈ ಘಟನೆ ನಡೆದಿದೆ.