ಜಾಗತಿಕ ಹಸಿವು ಸೂಚ್ಯಂಕ 2022 : 107ನೇ ಸ್ಥಾನಕ್ಕೆ ಕುಸಿದ ಭಾರತ.

58
firstsuddi

ನವದೆಹಲಿ : ಜಾಗತಿಕ ಹಸಿವು ಸೂಚ್ಯಂಕ 2022ರ ಪಟ್ಟಿಯಲ್ಲಿ ಭಾರತವು 107ನೇ ಸ್ಥಾನಕ್ಕೆ ಕುಸಿತ ಕಂಡಿದೆ. ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಗಳಿಗಿಂತಲೂ ಭಾರತ ಕೆಳಗಿನ ಸ್ಥಾನದಲ್ಲಿರುವುದು ದಾಖಲಾಗಿದೆ.

ನೇಪಾಳ (81), ಪಾಕಿಸ್ತಾನ (99), ಶ್ರೀಲಂಕಾ (64) ಮತ್ತು ಬಾಂಗ್ಲಾದೇಶ (84) ಸ್ಥಾನದಲ್ಲಿದೆ. ಚೀನಾ, ಟರ್ಕಿ, ಕುವೈತ್ ಸೇರಿದಂತೆ ಹದಿನೇಳು ದೇಶಗಳು GHI ಸ್ಕೋರ್ ನಲ್ಲಿ ಐದಕ್ಕಿಂತ ಕಡಿಮೆ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿವೆ ಎಂದು ಗ್ಲೋಬಲ್ ಹಂಗರ್ ಇಂಡೆಕ್ಸ್ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ.

ಐರಿಶ್ ಅನುದಾನಿತ ಸಂಸ್ಥೆ ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ಜರ್ಮನ್ ಸಂಸ್ಥೆ ವೆಲ್ಟ್ ಹಂಗರ್ ಹಿಲ್ಫ್ ಸಹಭಾಗಿತ್ವದಲ್ಲಿ ಸಿದ್ಧಗೊಳಿಸಿರುವ ಈ ವರದಿಯು, ಭಾರತದಲ್ಲಿನ ಹಸಿವಿನ ಮಟ್ಟವು ‘ಗಂಭೀರ’ವಾಗಿದೆ ಎಂದು ವ್ಯಾಖ್ಯಾನಿಸಿದೆ.

2021ರ ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತವು 116 ದೇಶಗಳ ಪೈಕಿ 101 ನೇ ಸ್ಥಾನದಲ್ಲಿತ್ತು. ಈ ಬಾರಿ 121 ದೇಶಗಳು ಈ ಪಟ್ಟಿಯಲ್ಲಿದ್ದು, ಭಾರತ 107ನೇ ಸ್ಥಾನಕ್ಕೆ ಕುಸಿದಿದೆ. ಭಾರತದ ಜಿಎಚ್ ಐ ಅಂಕವು 2000ನೇ ಇಸವಿಯಲ್ಲಿ 38.8ರಷ್ಟಿತ್ತು. ಅದು 2014- 2022ರ ನಡುವೆ 28.2- 29.1ಕ್ಕೆ ಇಳಿಕೆಯಾಗಿದೆ.