ಜಾರಕಿಹೊಳಿ ಸಿಡಿ ಪ್ರಕರಣ : ವೀಡಿಯೋದಲ್ಲಿದ್ದ ವಾಯ್ಸ್ ಸ್ಯಾಂಪಲ್ ಎಫ್‍ಎಸ್‍ಎಲ್‍ಗೆ ರವಾನೆ…

125
Firstsuddi

ಬೆಂಗಳೂರು : ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡೀಯೋದಲ್ಲಿರುವ ಧ್ವನಿ ಚಿಕ್ಕಮಗಳೂರು ವ್ಯಕ್ತಿಯದ್ದು ಎನ್ನುವ ಶಂಕೆ ವ್ಯಕ್ತವಾಗಿದ್ದರಿಂದ 10 ನಿಮಿಷಗಳ ಧ್ವನಿಯನ್ನು ಪೊಲೀಸರು ಎಫ್‍ಎಸ್‍ಎಲ್‍ಗೆ ಕಳುಹಿಸಲಾಗಿದ್ದು, ಇಂದು ವರದಿ ಹೊರ ಬೀಳುವ ಸಾಧ್ಯತೆಯಿದೆ.

ರಮೇಶ್ ಜಾರಕಿಹೊಳಿಯವರದ್ದೇ ಎನ್ನಲಾಗುತ್ತಿರುವ ಸಿಡಿಯಲ್ಲಿರುವ ಹಿನ್ನಲೆ ಧ್ವನಿಗೆ ಸಾಮ್ಯತೆ ಹೊಂದುವ ಚಿಕ್ಕಮಗಳೂರಿನ ವ್ಯಕ್ತಿಯ ವಾಯ್ಸ್ ಸ್ಯಾಂಪಲ್ ಅನ್ನು ಈಗಾಗಲೇ ಎಸ್‍ಐಟಿ ಸಂಗ್ರಹಿಸಿದ್ದು, ಎಫ್‍ಎಸ್‍ಎಲ್‍ಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಧ್ವನಿ ಆ ವ್ಯಕ್ತಿಯದ್ದೇ ಎಂದು ತಿಳಿದು ಬಂದರೆ ತಕ್ಷಣವೇ ವ್ಯಕ್ತಿಯನ್ನು ಎಸ್ಐಟಿ ಬಂಧಿಸುವ ಸಾಧ್ಯತೆಯಿದೆ.