ಜಿಲ್ಲಾಧಿಕಾರಿಗಳೇ ವೈರಸ್ ವಿರುದ್ಧ ಹೋರಾಟದ ಫೀಲ್ಡ್ ಕಮಾಂಡರ್ ಗಳು : ಪ್ರಧಾನಿ ಮೋದಿ.

124
firstsuddi

ನವದೆಹಲಿ : ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ಬಳಿಕ ಮಾತನಾಡಿದ ಪ್ರಧಾನಿ ಮೋದಿಯವರು, ಫೀಲ್ಡ್ ಕಮಾಂಡರ್ ಗಳಂತೆ ನೀವು ಕೆಲಸ ಮಾಡಬೇಕು. ಜಿಲ್ಲಾಧಿಕಾರಿಗಳೇ ವೈರಸ್ ವಿರುದ್ಧ ಹೋರಾಟದ ಫೀಲ್ಡ್ ಕಮಾಂಡರ್ ಗಳು. ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದರೆ ಇಡೀ ದೇಶ ಗೆದ್ದಂತೆ. ಈಗಾಗಲೇ ಹಲವು ಅಧಿಕಾರಿಗಳು ತಮ್ಮ ಆಪ್ತರನ್ನು ಕಳೆದುಕೊಂಡಿದ್ದಾರೆ. ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಪೀಲ್ಡ್ ಕಮಾಂಡರ್ ಗಳಂತೆ ಇಡೀ ಜಿಲ್ಲೆ ಸಶಕ್ತೀಕರಣ ಮಾಡಿ. ನಿಮ್ಮ ಜಿಲ್ಲೆಯ ಕ್ರಮಗಳು ಬೇರೆ ಜಿಲ್ಲೆಗೂ ಮಾದರಿಯಾಗುತ್ತದೆ ಎಂದು ಹೇಳಿದ್ದಾರೆ.

ಪಕ್ಷಭೇದ ಮರೆತು ಕೊರೊನಾ ಎದುರಿಸಲು ಒಂದಾಗಿ ಇದಕ್ಕೆ ಜನಶಕ್ತಿ ಮುಖ್ಯ ಎಂದು ಪ್ರಧಾನಿ ಮೋದಿಯವರು ಅಭಿಪ್ರಾಯಪಟ್ಟರು. ನನ್ನ ಗ್ರಾಮವನ್ನು ಕೊರೊನಾ ಮುಕ್ತ ಮಾಡುತ್ತೇನೆಂದು ಸಂಕಲ್ಪ ಮಾಡಿಕೊಳ್ಳಿ. ದೇಶದ ಗ್ರಾಮಗಳ ಜನರೇ ಸಂಕಲ್ಪ ತೆಗೆದುಕೊಳ್ಳಬೇಕು. ನಿಮ್ಮ ಸಲಹೆ, ಅಭಿಪ್ರಾಯಗಳನ್ನು ಲಿಖಿತವಾಗಿ ತಿಳಿಸಿ ಎಂದು ಜಿಲ್ಲಾಧಿಕಾರಿಗಳ ಜೊತೆ ಸಭೆಯಲ್ಲಿ ಮೋದಿಯವರು ಹೇಳಿದರು.

ಪಿಎಂ ಕೇರ್ಸ್ ಫಂಡ್ ನಿಂದ ದೇಶದ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಿ.ಕೋವಿಡ್ ಲಸಿಕೆ ಪೋಲಾಗದಂತೆ ತಡೆಯಬೇಕು. ಆಸ್ಪತ್ರೆಗಳಿಗೆ ವಿದ್ಯುತ್ ಪೂರೈಕ್ ಸ್ಥಗಿತವಾಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಮೈಸೂರು, ಕೋಲಾರ, ಮಂಡ್ಯ, ತುಮಕೂರು, ಕೊಡಗು, ಉತ್ತರ ಕನ್ನಡ, ಹಾಸನ, ಬಳ್ಳಾರಿ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ ಮೊದಲಾದ ಜಿಲ್ಲೆಗಳ ಡಿಸಿಗಳ ಜೊತೆ ಪಿಎಂ ಇಂದು ಸಂವಾದ ನಡೆಸಿದರು.