ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಕಚೇರಿಯಲ್ಲಿ ಕಳ್ಳತನ…

50
firstsuddi

ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಕಚೇರಿಯಲ್ಲಿ ಕಳ್ಳತನವಾಗಿರುವ ಘಟನೆ ನಗರದ ಕಚೇರಿಯಲ್ಲಿ ನಡೆದಿದೆ.

ಸರ್ಕಾರದಿಂದ ಕೊಟ್ಟಿರುವ ಆಪ್ತ ಸಹಾಯಕರ ಜೊತೆ ಸಚಿವ ಜಾರ್ಜ್ ಅವರು ಇಟ್ಟುಕೊಂಡಿರುವ ಇಬ್ಬರು ಆಪ್ತ ಸಹಾಯಕರು ಅದೇ ಕಚೇರಿಯಲ್ಲಿ ಇದ್ದಾರೆ. ಎರಡು ದಿನದ ಹಿಂದೆ ಕಚೇರಿಯಲ್ಲಿ ಬ್ಯಾಗ್ ಇಟ್ಟು ಹೊರಗಡೆ ಹೋಗಿ ಬರುವಷ್ಟರಲ್ಲಿ ಬ್ಯಾಗ್ ನಾಪತ್ತೆಯಾಗಿದೆ. ಪ್ರವಾಸಿ ಮಂದಿರದಲ್ಲಿ ಸಿಸಿ ಕ್ಯಾಮೆರಾಗಳು ಇಲ್ಲದ ಕಾರಣ ಕದ್ದವರು ಯಾರೆಂದು ಕೂಡ ಸ್ಪಷ್ಟವಿಲ್ಲದಂತಾಗಿದೆ. 

ದಾಖಲೆ ಹಾಗೂ ಹಣ ಕಳುವಾದ ಹಿನ್ನೆಲೆ ಚಿಕ್ಕಮಗಳೂರು ನಗರದ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.