ಜೆಇಇ ಪರೀಕ್ಷೆಯಲ್ಲಿ ತಲವಾನೆ ಶ್ರೀಜಿತ್ ಅವರಿಗೆ 418ನೇ ಸ್ಥಾನ…

371
firstsuddi

ಮಂಗಳೂರು : ಇಲ್ಲಿನ ಶಾರದಾ ವಿದ್ಯಾನಿಕೇತನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಟಿ.ಎಂ ಶ್ರೀಜಿತ್ ಅವರು ಜೆಇಇ ಪರೀಕ್ಷೆಯಲ್ಲಿ 418ನೇ ಸ್ಥಾನ ಗಳಿಸಿದ್ದಾರೆ. ಇವರು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಸಮೀಪದ ತಲವಾನೆ ನಿವಾಸಿ ಮಂಜುನಾಥ್ ಹಾಗೂ ಮಮತಾ ಮಂಜುನಾಥ್ ಅವರ ಪುತ್ರರಾಗಿದ್ದು, ಇವರು ಬಿ.ಜಿ.ಎಸ್ ಶಾಲೆ ಕೆಂಗೇರಿ ಬೆಂಗಳೂರಿನಲ್ಲಿ 1 ರಿಂದ 10ನೇ ತರಗತಿ ವರೆಗೆ ವ್ಯಾಸಂಗ ಮಾಡಿದ್ದಾರೆ. ಇವರ ಸಾಧನೆಗೆ ಶಾಲೆಯ ಶಿಕ್ಷಕರು ಹಾಗೂ ಶಾರದ ವಿದ್ಯಾನಿಕೇತನ ಕಾಲೇಜು ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
ಜೆಇಇಯಲ್ಲಿ 418ನೇ ಸ್ಥಾನ ಪಡೆದು ತೇರ್ಗಡೆ ಆಗಿರುವ ಟಿ.ಎಂ ಶ್ರೀಜಿತ್ ಅವರು ಆರ್ಕಿಟೆಕ್ಚರ್(ವಾಸ್ತುಶಿಲ್ಪ) ಓದುವ ಗುರಿ ಹೊಂದಿದ್ದಾರೆ.