ಜೆಎನ್‍ಯುನಲ್ಲಿ ಹೊಸ ನಿಯಮ : ವಿದ್ಯಾರ್ಥಿಗಳು ಧರಣಿ ಮಾಡಿದ್ರೆ ಭಾರೀ ದಂಡ, ಹಿಂಸಾಚಾರ ನಡೆಸಿದ್ರೆ ಪ್ರವೇಶ ರದ್ದು…

55
firstsuddi

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು (ಜೆಎನ್‍ಯು) ಹಿಂಸಾಚಾರವನ್ನು ತಡೆಯಲು ಹೊಸದೊಂದು ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ವಿದ್ಯಾರ್ಥಿಗಳು ಧರಣಿ ನಡೆಸಿದರೇ 20,000 ರೂ. ಗಳಿಂದ 30,000 ರೂ.ಗಳ ದಂಡ ವಿಧಿಸಲಾಗುತ್ತದೆ. ಯಾವುದಾದರೂ ಹಿಂಸಾಚಾರ ಘಟನೆಯನ್ನು ನಡೆಸಿದರೇ ಅವರ ಪ್ರವೇಶವನ್ನು ರದ್ದುಗೊಳಿಸುವುದಾಗಿ ತಿಳಿಸಿದೆ.

ಈ ನಿಯಮಗಳು ಫೆಬ್ರವರಿ 3 ರಿಂದ ಜಾರಿಗೆ ಬಂದಿವೆ. ಜೆಎನ್ ಯು ವಿದ್ಯಾರ್ಥಿಗಳ ಶಿಸ್ತಿನ ನಿಯಮಗಳು ಹಾಗೂ ಸರಿಯಾದ ನಡುವಳಿಕೆಗೆ ಸಂಬಂಧಿಸಿ 10 ಪುಟಗಳಿಗೆ ನೋಟಿಸ್ ಜಾರಿ ಮಾಡಿದೆ. ಪ್ರತಿಭಟನೆಗಳು ಹಾಗೂ ಫೋರ್ಜರಿಗಳಂತಹ ವಿವಿಧ ರೀತಿಯ ಕೃತ್ಯಗಳಿಗೆ ಅನೇಕ ಶಿಕ್ಷೆಯನ್ನು ಕಾಯ್ದಿರಿಸಿದೆ.

ಈ ಹಿಂದೆ ಬಿಬಿಸಿ ಸಿದ್ಧಪಡಿಸಿದ `ಮೋದಿ ಎ ಕ್ವಶನ್’ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದಲ್ಲಿ ಹಲವು ಪ್ರತಿಭಟನೆಗಳು ನಡೆದವು. ಈ ಕಾರಣಗಳಿಂದಾಗಿ ವಿಶ್ವವಿದ್ಯಾಲಯ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.