ಜೈಲಿಗೆ ಹೋಗಿ ಬಂದವರೆಲ್ಲಾ ಚೌಕಿದಾರ್ ಗಳಾದ್ರೆ ನಾವು ಏನು ಆಗಬೇಕು?-ಸಿದ್ದರಾಮಯ್ಯ…

174

ಚಿಕ್ಕಮಗಳೂರು : ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಅವರ ಪರ ಪ್ರಚಾರ ಭಾಷಣದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರಧಾನಿ ಮೋದಿ ಚುನಾವಣೆ ಭಾಷಣದಲ್ಲಿ ದೇಶದ ಸಮಸ್ಯೆ ಬಗ್ಗೆ ಮಾತಾನಾಡುವುದಿಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವ ಆಡ್ತಿದೆ. ಆದ್ರೂ ಪ್ರಧಾನಿ ಮೋದಿ ಎಲ್ಲೂ ಈ ಬಗ್ಗೆ ಮಾತಾನಾಡುತ್ತಿಲ್ಲ.ಕೋಮುವಾದ ಬಿತ್ತಲು ನಿಮಗೆ ಅಧಿಕಾರ ಕೊಡಬೇಕಾ. ಅಮಿತ್ ಶಾ ಜೈಲಿಗೆ ಹೋಗಿ ಬಂದವನು. ಇವರಿಗೆ ಜನರು ಮ್ಯಾಂಡೇಟ್ ಕೊಟ್ಟಿದ್ದಾರಾ. ರಾಷ್ಟ್ರಪತಿಯಿಂದ ಚೌಕಿದಾರ್ ಪಟ್ಟ ತೆಗೆದುಕೊಂಡಿದ್ದಾರಾ ಮೋದಿ,ಇಲ್ಲ ಇವರು ಚೌಕಿದಾರ್ ಅಲ್ಲಾ, ಚೋರ್ ಚೌಕಿದಾರ್ ಗಳು. ಇವರನ್ನ ಚೌಕಿದಾರ್ ಚೋರ್ ಹೇ ಅಂತಾ ಕರೆಯುವುದಿಲ್ಲ. ಭ್ರಷ್ಟಾಚಾರ ಪಾಲುದಾರ್ ಅಂತಾ ಕರೆಯತ್ತೇನೆ. ಜೈಲಿಗೆ ಹೋಗಿ ಬಂದವರೆಲ್ಲಾ ಚೌಕಿದಾರ್ ಗಳಾದ್ರೆ ನಾವು ಏನು ಆಗಬೇಕು?ಯಡಿಯೂರಪ್ಪ, ಜನಾರ್ಧನ್ ರೆಡ್ಡಿ ಹೀಗೆ ಸಾಲು ಸಾಲು ಬಿಜೆಪಿ ನಾಯಕರು ಜೈಲಿಗೆ ಹೋಗಿ ಬಂದು ಈಗ ನಾವು ಚೌಕಿದಾರ್ ಅಂತಾ ಹೇಳ್ತಾ ಇದ್ದಾರೆ ಹಾಗಾದ್ರೆ ನಾವು ಏನು ಹೇಳಬೇಕು ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ ಅವರು ಯಡಿಯೂರಪ್ಪ, ಶೋಭಾ, ಸಿ.ಟಿ.ರವಿ ಮನೆಮೇಲೆ ಯಾಕೆ ರೈಡ್ ಮಾಡಿಲ್ಲ.ಇವರೆಲ್ಲಾ ಸತ್ಯಹರಿಶ್ಚಂದ್ರರಾ ಹಾಗಾದ್ರೆ ನಿಮಗೆ ಜಿಡಿಎಸ್ ಹಾಗೂ ಕಾಂಗ್ರೆಸ್ ಯವರೇ ಕಾಣೋದಾ ದಾಳಿ ಮಾಡೋಕೆ. ಚುನಾವಣೆ ಮುಗಿದ್ ಮೇಲೆ ದಾಳಿ ಮಾಡಿ. ನಾವು ಕಾನೂನಿಗೆ ಬೆಲೆ ಕೊಡ್ತಿವಿ. ಆದ್ರೆ ಕಾನೂನು ಯಾರು ದುರುಪಯೋಗ ಪಡಿಸಿಕೊಳ್ಳಬಾರದು ಎಂದಿದ್ದಾರೆ.