ಮೂಡಿಗೆರೆ: ಕರ್ನಾಟಕ ರಾಜ್ಯ ತುರ್ತು ಸೇವೆಗಳ ಇಲಾಖೆ ಹಾಗು ಅಗ್ನಿಶಾಮಕ ಠಾಣೆ ಮೂಡಿಗೆರೆ ಇದರ ವತಿಯಿಂದ ದಿನಾಂಕ:-14-04-2019 ರಿಂದಾ 20-04-2019 ರವರಗೆ ನಡೆಯುವ ಕಾರ್ಯಕ್ರಮಕ್ಕೆ ಇಂದು ಅಗ್ನಿಶಾಮಕ ಮತ್ತು ತುರ್ತು ಸೇವಾ ದಿನಾಚರಣೆ ಸಪ್ತಾಹಕ್ಕೆ ಚಾಲನೆಯನ್ನು ನೀಡಿ ಹಾಗೂ ಇದರ ಅಂಗವಾಗಿ ನಾಗರಿಕರಿಗೆ ಬೆಂಕಿ ಅವಗಡದ ಬಗ್ಗೆ ಜನಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಬೆಂಕಿ ಆಕಸ್ಮಿಕದ ಬಗ್ಗೆ ನಾಗರಿಕರಿಗೆ ತಿಳುವಳಿಕೆ ಮೂಡಿಸುವ ಸಲುವಾಗಿ ಇಂದು ಅಗ್ನಿಶಾಮಖ ಸಿಬ್ಬಂದಿಗಳು ಸ್ವಯಂಪ್ರೇರಿತರಾಗಿ ಬೆಂಕಿ ಅವಗಡದ ಬಗ್ಗೆ ಹಾಗು ಅಪಘಾತವಾದಾಗ ಅದರಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂದು ತಿಳಿಯೇಳುವ ಹಾಗು ಇದರ ಬಗ್ಗೆ ಸಂಕ್ಷಿಕ್ತವಾಗಿ ಮಾಹಿತಿಯುಳ್ಳ ಕರಪತ್ರವನ್ನು ಪಟ್ಟಣದ ವಿವಿದ ಜನಜಂಗುಳಿ ಪ್ರದೇಶ ಸೇರಿದಂತೆ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ವಿತರಿಸುವುದರೊಂದಿಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು.
ಬೆಂಕಿ ಅಪಘಾತ ದೊಡ್ಡದಿರಲಿ ಸಣ್ಣದಿರಲಿ ಏನಾದರು ಅಪಘಾತವಾದಲ್ಲಿ ಕೂಡಲೇ ಸಂಭದಪಟ್ಟ ಅಗ್ನಿಶಾಮಕ ಸಹಾಯವಾಣಿ ಸಂಖ್ಯೆ:08263-221101 ಇವರಿಗೆ ಮಾಹಿತಿಯನ್ನು ನೀಡಬೇಕೆಂದು ಹಾಗೂ ಈ ಸುಡುಬಿಸಿಲಿನಲ್ಲಿ ಬೆಂಕಿಯ ಅಪಘಾತಗಳು ಹೆಚ್ಚಾಗಿ ಸಂಬವಿಸುವುದರಿಂದ ತಮ್ಮ ತಮ್ಮ ಮನೆಗಳಲ್ಲಿ ಶೇಖರಿಸಿ ಇಟ್ಟಿರುವ ಸೀಮೆಎಣ್ಣೆ ಪೆಟ್ರೋಲ್ ಸ್ಪೋಟಕ ಸಾಮಾಗ್ರಿಗಳಿಂದ ಹೆಚ್ಚೆತ್ತುಕೊಳ್ಳಬೇಕು ಬೆಂಕಿ ಅವಗಡಗಳು ಸಂಬವಿಸಿದಲ್ಲಿ ತುರ್ತಾಗಿ ಬೆಂಕಿಯನ್ನು ಹಾರಿಸಲು ನೀರನ್ನು ಬಳಸದೇ ಮರಳು ಅಥವಾ ಹೊದ್ದೆ ಬಟ್ಟೆಗಳನ್ನು ಬಳಸಿ ಬೆಂಕಿಯನ್ನು ಹಾರಿಸಿ ಎಂಬಂತಹ ಹಲವಾರು ಮಾಹಿತಿ ಕೈಪಿಡಿಯನ್ನೊಳಗೊಂಡ ಕರಪತ್ರವನ್ನು ವಿತರಿಸಿದರು.
Home ಸ್ಥಳಿಯ ಸುದ್ದಿ ಮೂಡಿಗೆರೆ: ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ವತಿಯಿಂದ ನಾಗರಿಕರಿಗೆ ಬೆಂಕಿ ಆಕಸ್ಮಿಕ ಕುರಿತು ಜನಜಾಗೃತಿ...










