ಟರ್ಕಿ, ಸಿರಿಯಾ ಭೂಕಂಪ – 24 ಸಾವಿರ ಮಂದಿ ಸಾವು, 8 ವರ್ಷದ ಬಾಲಕಿಯನ್ನು ರಕ್ಷಿಸಿದ ಎನ್‌ಡಿಆರ್‌ಎಫ್.

42
firstsuddi

ಇಸ್ತಾಂಬುಲ್ : ಪ್ರಬಲ ಭೂಕಂಪದಿಂದ ನಲುಗಿರುವ ಟರ್ಕಿ, ಸಿರಿಯಾದಲ್ಲಿ ದಿನವೂ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, 24 ಸಾವಿರ ತಲುಪಿದೆ.

ಭೂಕಂಪದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದು ಒಂದೆಡೆಯಾದರೆ, ಬದುಕುಳಿದವರು ನೀರು, ಆಹಾರದ ಕೊರತೆ ಎದುರಿಸುವಂತಾಗಿದೆ. ಜನರು ಪ್ರಾಣಾಪಾಯದಿಂದ ಪಾರಾಗಲು ಮನೆಗಳಿಗೆ ತೆರಳದೇ ರಸ್ತೆಯಲ್ಲೇ ಜೀವನ ನಡೆಸುತ್ತಿದ್ದಾರೆ.

ಭೂಕಂಪದ ನಂತರ ಎರಡು ದೇಶಗಳಲ್ಲಿ ಕನಿಷ್ಠ 8,70,000 ಜನರಿಗೆ ತುರ್ತಾಗಿ ಆಹಾರದ ಅಗತ್ಯವಿದೆ. ಸಿರಿಯಾದಲ್ಲಿ ಭೂಕಂಪ 53 ಲಕ್ಷ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ ಎಂದು ಯುಎನ್ ಎಚ್ಚರಿಸಿದೆ.

ಟರ್ಕಿಯ ನೂರ್ಡಗಿ ಎಂಬಲ್ಲಿ ಅವಶೇಷಗಳಡಿ ಸಿಲುಕಿದ 8 ವರ್ಷದ ಬಾಲಕಿಯನ್ನು ಭಾರತದ ಎನ್‍ಡಿಆರ್ ಎಫ್ ತಂಡ ಜೀವಂತವಾಗಿ ರಕ್ಷಣೆ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎನ್‍ಡಿಆರ್ ಎಫ್, ಕಠಿಣ ಪರಿಶ್ರಮದೊಂದಿಗೆ ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ಫೋಟೋ ಹಂಚಿಕೊಂಡಿದೆ.