ಟಿಪ್ಪರ್ ಲಾರಿ ಪಲ್ಟಿಯಾಗಿ ಒಂದೇ ಕುಟುಂಬದ ಐವರು ಸಾವು…

43
firstsuddi

ಬಾಗಲಕೋಟೆ: ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಹೊನ್ಯಾಳ ಕ್ರಾಸ್ ಬಳಿ ನಡೆದಿದೆ.

ಬಾದದಿನ್ನಿ ಗ್ರಾಮದ ಯಂಕಪ್ಪ ತೋಳಮಟ್ಟಿ, ಆತನ ಪತ್ನಿ ಯಲ್ಲವ್ವ, ಮಗ ಪುಂಡಲೀಕ, ಮಗಳು ನಾಗವ್ವ ಹಾಗೂ ಗಂಡ ಅಶೋಕ ಬಮ್ಮಣ್ಣವರ ಮೃತರು. ಇವರೆಲ್ಲರೂ ಹೊಲದ ಕೆಲಸ ಮುಗಿಸಿ ರಸ್ತೆಪಕ್ಕ ನಿಂತಿದ್ದರು. ಈ ವೇಳೆ ಟೈರ್ ಬ್ಲಾಸ್ಟ್ ಆಗಿ ಟಿಪ್ಪರ್ ಲಾರಿ ಅವರ ಮೇಲೆ ಪಲ್ಟಿಯಾಗಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಬೀಳಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.