ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್​ಗೆ ನೋಟಿಸ್…

160
firstsuddi

ಪಣಜಿ : ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ವಿವಾದದಲ್ಲಿ ಸಿಲುಕಿದ್ದಾರೆ. ಗೋವಾದಲ್ಲಿರುವ ತಮ್ಮ ವಿಲ್ಲಾವನ್ನು(ನಿವಾಸ) ನೋಂದಾಯಿಸದೇ ‘ಹೋಮ್ ಸ್ಟೇ’ ಆಗಿ ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಯುವರಾಜ್ ಸಿಂಗ್​ಗೆ ಇದೀಗ ಗೋವಾ ಸರ್ಕಾರ ನೋಟಿಸ್ ಜಾರಿ ಮಾಡಿದೆ.

ನವೆಂಬರ್ 18 ರಂದು ಉತ್ತರ ಗೋವಾದ ಮೋರ್ಜಿಮ್ ಪ್ರದೇಶದಲ್ಲಿರುವ ‘ಕಾಸಾ ಸಿಂಗ್’ ಹೆಸರಿನ ಯುವರಾಜ್ ಸಿಂಗ್ ಅವರ ವಿಲ್ಲಾದ ವಿಳಾಸಕ್ಕೆ ಗೋವಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ನೋಟಿಸ್ ನೀಡಿದ್ದು, ವಿಚಾರಣೆಗಾಗಿ ಡಿಸೆಂಬರ್ 8 ರಂದು ಬೆಳಗ್ಗೆ 11 ಗಂಟೆಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.

ವಾಣಿಜ್ಯ ಪ್ರವಾಸೋದ್ಯಮ ಕಾಯ್ದೆ 1982ರ ಪ್ರಕಾರ, ಗೋವಾದಲ್ಲಿ ಹೋಟೆಲ್/ ಅತಿಥಿ ಗೃಹವನ್ನು ನಿರ್ವಹಿಸಲು ನೋಂದಣಿ ಕಡ್ಡಾಯವಾಗಿದೆ.