ಟೋಕಿಯೋ ಒಲಂಪಿಕ್ಸ್ : ನಾಲ್ಕು ದಶಕಗಳ ಬಳಿಕ ಪದಕ ಗೆದ್ದ ಭಾರತದ ಹಾಕಿ ಟೀಂ…

115
firstsuddi

ಟೋಕಿಯೋ : ಸುಮಾರು ನಾಲ್ಕು ದಶಕಗಳ ಬಳಿಕ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸೆಮಿಪೈನಲ್ ಪ್ರವೇಶಿಸಿ ಕಂಚಿನ ಪದಕ ಗೆದ್ದು ಇತಿಹಾಸ ಸೃಷ್ಟಿಸಿದೆ.

ಇಂದು ನಡೆದ ಒಲಿಂಪಿಕ್ಸ್ ನಲ್ಲಿ ಭಾರತ ತಂಡವು ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿ ಕಂಚಿನ ಪದಕ ಜಯಿಸಿದೆ.

1980ರ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಭಾರತ ಪದಕ ಪಡೆದುಕೊಂಡಿತ್ತು. ಇದೀಗ 41 ವರ್ಷಗಳ ಬಳಿಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.