ಟ್ವಿಟರ್‌ನಲ್ಲಿ ಬ್ಲೂ ಟಿಕ್ ಬೇಕೆಂದರೆ ತಿಂಗಳಿಗೆ ಇಷ್ಟು ಪಾವತಿಸಿ…

144
firstsuddi

ವಾಷಿಂಗ್ಟನ್ : ಎಲೋನ್ ಮಸ್ಕ್ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಟ್ವಿಟರ್‌ನ ಬ್ಲೂ ಟಿಕ್ ಗೆ ತಿಂಗಳಿಗೆ 19.99 ಡಾಲರ್ (ಸುಮಾರು 1,600 ರೂ.) ಪಾವತಿಸಬೇಕಾಗಬಹುದು ಎಂದು ವರದಿಯಾಗಿತ್ತು. ಆದರೆ ಇದೀಗ ಮಸ್ಕ್ ತಿಂಗಳಿಗೆ 8 ಡಾಲರ್ ಪಾವತಿಸಬೇಕು ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಸ್ಕ್, ಪ್ರಸ್ತುತ ಬ್ಲೂ ಟಿಕ್ ಮಾರ್ಕ್ ಹೊಂದಿರುವ ಅಥವಾ ಹೊಂದದೇ ಇರುವ ಬಳಕೆದಾರರ ವ್ಯವಸ್ಥೆ ಮೂರ್ಖತನವಾಗಿದೆ. ಈಗ ಎಲ್ಲಾ ಶಕ್ತಿ ಜನರಿಗೆ! ಬ್ಲೂ ಟಿಕ್ ಬೇಕೆಂದರೆ ತಿಂಗಳಿಗೆ 8 ಡಾಲರ್ ಪಾವತಿಸಿ ಎಂದು ಬರೆದಿದ್ದಾರೆ.

ಎಂಟು ಯುಎಸ್ ಡಾಲರ್ ಎಂದರೆ ಭಾರತದ 661 ರೂಪಾಯಿ. ಒಂದು ವೇಳೆ ಇಲ್ಲಿಯವರೆಗೆ ಬ್ಲೂ ಟಿಕ್ ಹೊಂದಿದ್ದ ಬಳಕೆದಾರರು ಪ್ರತಿ ತಿಂಗಳು ನಿಗದಿತ ಪಾವತಿಯನ್ನು ಮಾಡದೇ ಹೋದಲ್ಲಿ ತಮ್ಮ ಬ್ಲೂ ಟಿಕ್ ಅನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.