ಹೈದರಾಬಾದ್ : ಟ್ವಿಟ್ಟರ್ ಸಹ-ಸಂಸ್ಥಾಪಕ ಜಾಕ್ ಡಾರ್ಸಿ ಅವರು ಸಿಇಓ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರ ಬೆನ್ನಲ್ಲೇ ಆ ಸ್ಥಾನಕ್ಕೆ ಭಾರತೀಯ ಮೂಲದ ಪರಾಗ್ ಅಗರವಾಲ್ ನೇಮಕವಾಗಿದ್ದಾರೆ.
ಪರಾಗ್ ಅಗರ್ವಾಲ್ ಯಾರು?
ಮುಂಬೈ ಐಐಟಿಯಲ್ಲಿ ಬಿಟೆಕ್ ಪದವಿ ಪಡೆದ ಪರಾಗ್ ಅಗರವಾಲ್ ಅವರು ಬಳಿಕ ಸ್ಟ್ಯಾನ್ಫೋರ್ಡ್ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪಿಹೆಚ್ಡಿ ಪೂರ್ಣಗೊಳಿಸಿದ ನಂತರ ಅಗರವಾಲ್ ಅಕ್ಟೋಬರ್ 2011 ರಲ್ಲಿ ಟ್ವಿಟ್ಟರ್ ಕಂಪನಿಯನ್ನು ಸೇರಿದ್ದರು. ಸ್ಟ್ಯಾನ್ ಫೋರ್ಡ್ ನಲ್ಲಿ ಓದುತ್ತಿದ್ದಾಗ, ಅವರು ಮೈಕ್ರೋಸಾಫ್ಟ್, ಯಾಹೂ ಮತ್ತು ಎಟಿ ಆ್ಯಂಡ್ ಟಿ ಲ್ಯಾಬ್ ಗಳಿಗೆ ಸಂಶೋಧನಾ ಇಂಟರ್ನಿ ಆಗಿ ಕೆಲಸ ಮಾಡಿದ್ದರು. ಪರಾಗ್ ಅಗರವಾಲ್ ಅವರನ್ನು ಮಾರ್ಚ್ 8, 2018 ರಂದು ಟ್ವಿಟ್ಟರ್ ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ(ಸಿಟಿಒ) ಆಗಿ ಆಗಿ ನೇಮಿಸಲಾಯಿತು. ಇದೀಗ ಅದೇ ಸಂಸ್ಥೆಯ ಮುಖ್ಯಸ್ಥ ಹುದ್ದೆಗೆ ಏರಿದ್ದಾರೆ.










