ಡಿಆರ್‌ಡಿಒ ಸಂಸ್ಥೆ ನಿರ್ಮಿಸಿದ ಚಾಲಕ ರಹಿತ ಯುದ್ದ ವಿಮಾನ ಪತನ…

215
firstsuddi

ಚಿತ್ರದುರ್ಗ : ಚಾಲಕ ರಹಿತ ವಿಮಾನ ಪತನವಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಜೋಡಿ ಚಿಕ್ಕನಹಳ್ಳಿಯಲ್ಲಿ ನಡೆದಿದೆ. ಮಾನವ ರಹಿತ ಯುದ್ದ ವಿಮಾನವನ್ನು ಪರೀಕ್ಷಾ ಕೇಂದ್ರದಿಂದ ರುಸ್ತುಂ-2 ವಿಮಾನವನ್ನು ಪರೀಕ್ಷಾರ್ಥವಾಗಿ ಹಾರಿಸಲಾಗಿತ್ತು. ಆದರೆ ನಿಯಂತ್ರಣ ಕಳೆದುಕೊಂಡ ವಿಮಾನ ಅಡಿಕೆ ತೋಟವೊಂದರ ಬಳಿ ಪತನವಾಗಿದೆ. ವಿಮಾನ ಪತನವಾಗುತ್ತಿದ್ದಂತೆ ಗ್ರಾಮಸ್ಥರು ಆತಂಕಗೊಂಡಿದ್ದು, ಬಳಿಕ ವಿಮಾನದಲ್ಲಿದ್ದವರ ರಕ್ಷಣೆಗೆ ಧಾವಿಸಿದ ಗ್ರಾಮಸ್ಥರು ಚಾಲಕ ರಹಿತ ವಿಮಾನವನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಧಿಕಾರಿಗಳು ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.