ಡಿಕೆಶಿ ಅವರ ಜಾಮೀನು ಅರ್ಜಿ ಆದೇಶವನ್ನು ಸೆ.25 ಕ್ಕೆ ಕಾಯ್ದಿರಿಸಿದ ಕೋರ್ಟ್, ಸೆ. 25 ರವರೆಗೂ ಡಿಕೆಶಿ ಅವರಿಗೆ ತಿಹಾರ್ ಜೈಲೇ ಗತಿ…

364
firstsuddi

ನವದೆಹಲಿ : ಅಕ್ರಮ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ಆದೇಶವನ್ನು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಸೆ. 25ಕ್ಕೆ ಕಾಯ್ದಿರಿಸಿದ್ದು, ಸೆ. 25 ರವರೆಗೂ ಡಿಕೆಶಿ ಅವರಿಗೆ ತಿಹಾರ್ ಜೈಲೇ ಗತಿಯಾಗಿದೆ. ಇಂದು ಬೆಳಿಗ್ಗೆ 11ಗಂಟೆಯಿಂದ ಸುದೀರ್ಘವಾದ ವಾದ, ಪ್ರತಿವಾದವನ್ನು ಆಲಿಸಿದ ನ್ಯಾ.ಯಾಧೀಶ ಅಜಯ್ ಕುಮಾರ್ ಕುಹಾರ್ ಅವರು ಸೆ.25 ಮದ್ಯಾಹ್ನ 3:30ಕ್ಕೆ ಅರ್ಜಿ ಆದೇಶವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು. ಇಡಿ ಪರ ವಕೀಲರಾದ ನಟರಾಜ್ ಅವರು ಡಿಕೆಶಿ ಅವರ ವಿರುದ್ಧ ಆರೋಪಗಳ ಸುರಿಮಳೆ ಗೈದರು. ಡಿ.ಕೆ. ಶಿವಕುಮಾರ್ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿ ಇಡಿ ವಾದ ಕೇವಲ ಊಹಾತ್ಮಕವಾಗಿದ್ದು, ಸಿನಿಮಾ ಕಥೆಯಂತಿದೆ. ಎಲ್ಲವನ್ನೂ ಇವರೇ ಹೇಳಿದರೆ ಟ್ರಯಲ್ ನ ಅವಶ್ಯಕತೆ ಏನು? ಕೇವಲ 4ದಿನ ವಿಚಾರಣೆ ಮಾಡಿರುವುದಾಗಿ ತಿಳಿಸಿದ್ದಾರೆ. ಹಾಗಾದರೆ 18ದಿನ ವಿಚಾರಣೆ ಮಾಡದೆ ಏನು ಮಾಡುತ್ತಿದ್ದರು ಎಂದು ಸುದೀರ್ಘವಾಗಿ ವಾದ ಮಂಡಿಸಿದರು. ವಾದ, ಪ್ರತಿವಾದವನ್ನು ಆಲಿಸಿದ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಸೆ.25 ಮಧ್ಯಾಹ್ನ 3:30ಕ್ಕೆ ಆದೇಶವನ್ನು ಕಾಯ್ದಿರಿಸಿದೆ.