ಡ್ಯಾನ್ಸ್ ಬಾರ್ ಮೇಲೆ ಪೊಲೀಸರ ದಾಳಿ – ಗುಪ್ತ ಕೋಣೆಯಲ್ಲಿದ್ದ 17 ಯುವತಿಯರ ರಕ್ಷಣೆ…

174
firstsuddi

ಮುಂಬೈ : ನಗರದ ಬಾರ್​ವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಗುಪ್ತ ಕೋಣೆಯಲ್ಲಿದ್ದ 17 ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಯುವತಿಯರನ್ನು ಗ್ರಾಹಕರ ಮುಂದೆ ನೃತ್ಯ ಮಾಡಲು ಬಳಸಿಕೊಳ್ಳಲಾಗುತ್ತಿದೆ ಎಂಬ ಸುಳಿವಿನ ಮೇರೆಗೆ ಬಾರ್ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.

ಬಾರ್ ಡಾನ್ಸ್ ನಡೆಸುತ್ತಿದ್ದ ವ್ಯಕ್ತಿ ಮಹಿಳೆಯರನ್ನು ರಹಸ್ಯ ಕೋಣೆಯಲ್ಲಿ ಕೂಡಿಟ್ಟಿದ್ದ. ಡಾನ್ಸ್ ಬಾರ್ ನ ಮೇಕಪ್ ಕೋಣೆಯಲ್ಲಿದ್ದ ಕನ್ನಡಿಯ ಹಿಂದೆ ಗುಪ್ತವಾಗಿ ರೂಮ್ ನಿರ್ಮಿಸಿ ಅದಕ್ಕೆ ಸ್ವಯಂಚಾಲಿತ ವಿದ್ಯುತ್ ಬಾಗಿಲು ಅಳವಡಿಸಲಾಗಿತ್ತು. ಇದನ್ನು ಗಮನಿಸಿದ ಪೊಲೀಸರು ತೆರವು ಮಾಡಲು ಯತ್ನಿಸಿದರು. ಆದರೆ ಅದು ಸಾಧ್ಯವಾಗದಿದ್ದಾಗ ಸುತ್ತಿಗೆಯಿಂದ ಗೋಡೆಯನ್ನು ಒಡೆದು 17 ಜನ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಪ್ರಕರಣ ಸಂಬಂಧ 20 ಜನರ ವಿರುದ್ಧ ದೂರು ದಾಖಲಾಗಿದೆ.