ತಂಗಿಯನ್ನೇ ಮದುವೆಯಾದ ಅಣ್ಣ!.. ಯಾಕೆ ಗೊತ್ತಾ?

75
firstsuddi

ಫಿರೋಜಾಬಾದ್ : ಉತ್ತರ ಪ್ರದೇಶದ ಫಿರೋಜಾಬಾದ್ ನ ತುಂಡ್ಲಾ ಪಟ್ಟಣದಲ್ಲಿ ಅಣ್ಣ ತನ್ನ ತಂಗಿಯನ್ನೇ ಮದುವೆಯಾಗಿರುವ ವಿಚಿತ್ರ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.

ಡಿಸೆಂಬರ್ 11 ರಂದು ಫಿರೋಜಾಬಾದ್ ನ ತುಂಡ್ಲಾದಲ್ಲಿ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 51 ಜೋಡಿಗಳು ವಿವಾಹವಾಗಿದ್ದರು. ಅದರಲ್ಲಿ ಈ ಜೋಡಿಯೂ ಒಂದು. ಮದುವೆಯಾದ ಪ್ರತಿ ದಂಪತಿಗಳಿಗೆ ರಾಜ್ಯ ಸರ್ಕಾರ ಉಡುಗೊರೆಗಳನ್ನು ಹೊರತುಪಡಿಸಿ 35,000 ರೂ. ಅನ್ನು ಕೊಡುತ್ತದೆ. ಈ ಯೋಜನೆಯ ಪ್ರಕಾರ, ವಧುವಿನ ಬ್ಯಾಂಕ್ ಖಾತೆಗೆ 20,000 ರೂ. ಠೇವಣಿ ಮಾಡಿ, 10,000 ರೂ. ಅನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಈ ಹಿನ್ನೆಲೆ ಸಹೋದರ ತನ್ನ ಸ್ವಂತ ಸಹೋದರಿಯನ್ನೇ ಮದುವೆಯಾಗಿದ್ದಾನೆ.

ಈವೆಂಟ್ ನ ವೀಡಿಯೋಗಳು ಮತ್ತು ಫೋಟೋಗಳು ಪ್ರಸಾರವಾದ ನಂತರ, ಗ್ರಾಮಸ್ಥರು ಈ ಸಾಮೂಹಿಕವಾಗಿ ವಿವಾಹವಾದ ದಂಪತಿಗಳಲ್ಲಿ ಒಬ್ಬರನ್ನು ಸಹೋದರ ಮತ್ತು ಸಹೋದರಿ ಎಂದು ಗುರುತಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಇದು ಪೊಲೀಸರ ಗಮನಕ್ಕೂ ಬಂದಿತು. ತಕ್ಷಣ ಎಚ್ಚೆತ್ತ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.