ತಂದೆ-ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ ಮಗ…

53
firstsuddi

ಬೆಂಗಳೂರು: ತಂದೆ-ತಾಯಿಯನ್ನು ಮಗನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಕೊಡಿಗೆಹಳ್ಳಿ ವ್ಯಾಪ್ತಿಯ ಬ್ಯಾಟರಾಯನಪುರದಲ್ಲಿ ನಡೆದಿದೆ.

ತಾಯಿ ಶಾಂತ (60), ತಂದೆ ಭಾಸ್ಕರ್ (63) ಕೊಲೆಯಾದ ದುರ್ದೈವಿಗಳು. ಇವರನ್ನು ಮಗ ಶರತ್ (26) ಕೊಲೆ ಮಾಡಿದ್ದಾನೆ. ಕೊಲೆಯಾದ ದಂಪತಿ ಮಂಗಳೂರು ಮೂಲದವರು. 12 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು, ತಾಯಿ ಕೇಂದ್ರ ಸರ್ಕಾರದ ಸಿಬ್ಬಂದಿಯಾಗಿದ್ದು, ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ತಂದೆ ಖಾಸಗಿ ಕ್ಯಾಂಟೀನ್ ವೊಂದರಲ್ಲಿ ಕ್ಯಾಶಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ದಂಪತಿಗೆ ಇಬ್ಬರು ಮಕ್ಕಳಿದ್ದು, ಓರ್ವ ಮಗ ಕೆಲಸಕ್ಕೆ ಹೋಗುತ್ತಿದ್ದಾನೆ. ಆರೋಪಿ ಶರತ್ ಮನೆಯಲ್ಲೇ ಇರುತ್ತಿದ್ದನು. ಶರತ್ ಮನೆಯಲ್ಲಿ ಆಗಾಗ ಸೈಕೋ ರೀತಿ ವರ್ತಿಸುತ್ತಿದ್ದ. ನಿನ್ನೆ ಸಂಜೆ ವೇಳೆಗೆ ಕುಡಿದು ಬಂದು ತಂದೆ-ತಾಯಿ ಜೊತೆ ಗಲಾಟೆ ಮಾಡಿಕೊಂಡಿದ್ದು, ಈ ವೇಳೆ ರಾಡ್ ನಿಂದ ತಂದೆ-ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಇತ್ತ ತಂದೆ-ತಾಯಿ ಮೃತಪಟ್ಟಿರುವುದನ್ನು ಗಮನಿಸಿದ ಆರೋಪಿ ಮನೆ ಮಾಡಿಕೊಂಡು ಪರಾರಿಯಾಗಿದ್ದಾನೆ. ಇಂದು ಬೆಳಗ್ಗೆ ದೊಡ್ಡ ಮಗ ತಂದೆ-ತಾಯಿ ಕರೆ ಮಾಡಿದ್ದಾನೆ. ಈ ವೇಳೆ ಅವರು ಕರೆ ಸ್ವೀಕರಿಸಲಿಲ್ಲ. ಕೂಡಲೇ ಪಕ್ಕದ ಮನೆಯವರಿಗೆ ಕರೆ ಮಾಡಿ ಚೆಕ್ ಮಾಡಲು ಹೇಳಿದ್ದಾನೆ. ಈ ವೇಳೆ ಡಬಲ್ ಮರ್ಡರ್ ಆಗಿರೋದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಈಶಾನ್ಯ ವಿಭಾಗ ಡಿಸಿಪಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಈ ಪ್ರಕರಣದ ಬಗ್ಗೆ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮಿ ಪ್ರಸಾದ್ ಪ್ರತಿಕ್ರಿಯಿಸಿದ್ದು, ಇಂದು ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಂದೆ ತಾಯಿ ಇಬ್ಬರ ಮೃತ ದೇಹ ಪತ್ತೆಯಾಗಿದೆ. ಮೊದಲ ಮಗ ದೂರು ನೀಡಿದ್ದಾರೆ. ಶರತ್(ಮೃತರ ಎರಡನೇ ಮಗ) ಈ ಕೃತ್ಯ ಎಸಗಿದ್ದಾನೆ ಎಂದು ಅರೋಪಿಸಿ ದೂರು ನೀಡಿದ್ದಾರೆ. ದೂರಿನ ಅನ್ವಯ ಕೇಸ್ ದಾಖಲು ಮಾಡಲಾಗಿದ್ದು, ಅರೋಪಿ ಶರತ್​ಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.