ತಕ್ಷಣವೇ ಕೀವ್ ತೊರೆಯುವಂತೆ ತನ್ನ ಪ್ರಜೆಗಳಿಗೆ ಭಾರತೀಯ ರಾಯಭಾರಿ ಕಚೇರಿ ಸೂಚನೆ…

90
firstsuddi

ನವದೆಹಲಿ : ಕೀವ್ ನ ವಾಯುವ್ಯ ರಸ್ತೆಗಳಲ್ಲಿ ರಷ್ಯಾ ಸೇನಾ ವಾಹನಗಳಿರುವ ಉಪಗ್ರಹ ಚಿತ್ರಗಳು ಬಿಡುಗಡೆಗೊಂಡಿದ್ದು, ಹೆಚ್ಚಿನ ದಾಳಿಯಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಕೀವ್ ನಗರ ಅಪಾಯಕ್ಕೆ ಸಿಲುಕಿದೆ.

ಈ ಹಿನ್ನಲೆಯಲ್ಲಿ ಉಕ್ರೇನ್ ರಾಜಧಾನಿಯಲ್ಲಿರುವ ಭಾರತೀಯ ಮೂಲದವರು ಈ ಕೂಡಲೇ ಕೀವ್ ಅನ್ನು ತೊರೆಯಿರಿ. ರೈಲು ಅಥವಾ ಇನ್ನಿತರ ಲಭ್ಯ ಸಾರಿಗೆ ವ್ಯವಸ್ಥೆ ಮೂಲಕ ರಾಜಧಾನಿಯಿಂದ ಹೊರಡಿ ಎಂದು ಉಕ್ರೇನ್ ನಲ್ಲಿರುವ ಭಾರತ ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ.

ಉಕ್ರೇನ್ ನಲ್ಲಿ ಇನ್ನೂ ಸುಮಾರು 16,000 ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಗುರುವಾರ ದಾಳಿ ಆರಂಭವಾದ ನಂತರ ಅನೇಕ ವಿದ್ಯಾರ್ಥಿಗಳು ಬಂಕರ್ ಗಳಲ್ಲಿ ದಿನ ಕಳೆಯುವಂತಾಗಿದ್ದು, ಅಲ್ಲಿಂದಲೇ ಫೋಟೊ, ವಿಡಿಯೋ ಶೇರ್ ಮಾಡಿರುವ ವಿದ್ಯಾರ್ಥಿಗಳು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಈಗಾಗಲೇ 8,000 ಭಾರತೀಯರು ಉಕ್ರೇನ್ ತೊರೆದಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.