ತವರೂರಿನಲ್ಲೇ ಕಾಫಿನಾಡು ಚಂದುಗೆ ನಿಂದನೆ.. ಅಷ್ಟಕ್ಕೂ ಆಗಿದ್ದೇನು?

100
firstsuddi

ಬರ್ತಡೇ ಸಾಂಗ್ ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ ಸ್ಟಾರ್ ಅಂದ್ರೆ ಅದು ಕಾಫಿನಾಡು ಚಂದು. ತನ್ನ ಪ್ರತಿ ವಿಡಿಯೋದಲ್ಲೂ ನಾನು ಶಿವಣ್ಣ, ಪುನೀತ್ ಅಣ್ಣನ ಅಭಿಮಾನಿ ಎಂದು ಹೇಳಿಯೇ ಬರ್ತಡೇ ಸಾಂಗ್ ಅನ್ನು ಹೇಳುತ್ತಿದ್ದರು. ಮೊನ್ನೆಯಷ್ಟೇ ಶಿವಣ್ಣ ಅವರನ್ನ ಭೇಟಿಯಾಗಿ ತಮ್ಮ ಮಹಾದಾಸೆಯನ್ನ ಈಡೇರಿಸಿಕೊಂಡಿದ್ದರು. ಕಾಫಿನಾಡು ಚಂದು ಅವರ ವೃತ್ತಿ ಆಟೋ ಓಡಿಸುವುದು. ಇದೀಗ ಆಟೋ ಓಡಿಸುವ ವೇಳೆ ಅಹಿತಕರ ಘಟನೆಯೊಂದು ನಡೆದಿದೆ.

ಚಂದು ಆಟೋ ಓಡಿಸುತ್ತಿದ್ದಾಗ ವ್ಯಕ್ತಿಯೊಬ್ಬ ಹಾಡೊಂದನ್ನು ಮಾಡಿಕೊಡುವಂತೆ ಕೇಳುತ್ತಾರೆ. ಅದಕ್ಕೆ ಚಂದು ನಾನೀಗ ಆಟೋ ಓಡಿಸುತ್ತಿದ್ದೇನೆ. ಸಂಜೆ ನಂತರ ಬನ್ನಿ ಮಾಡಿಕೊಡುವೆ ಎಂದು ಕೇಳಿಕೊಳ್ಳುತ್ತಾರೆ. ಆದರೆ, ಆ ವ್ಯಕ್ತಿ ಈಗಲೇ ಮಾಡಿಕೊಡುವಂತೆ ಒತ್ತಡ ಹಾಕುತ್ತಾರೆ. ಅದಕ್ಕೆ ಜಗ್ಗದ ಚಂದು ಅಲ್ಲಿಂದ ಹೊರಡಲು ಯತ್ನಿಸುತ್ತಾರೆ. ಆಗ ಆ ವ್ಯಕ್ತಿಯು ಹೋಗಲೋ, ನೀನು ಇದೀಗ ಬದುಕ್ತಿರೋದೇ ನಮ್ಮಂಥವರಿಂದ ಎಂದು ನಿಂದಿಸುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.