ಉಡುಪಿ : ತಾಯಿ ಬಡಿಸಲಿಲ್ಲ ಎಂಬ ಕೋಪಗೊಂಡ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಕೋಟ ಠಾಣಾ ವ್ಯಾಪ್ತಿಯ ಕಾರ್ಕಡದಲ್ಲಿ ನಡೆದಿದೆ.
ಕಾರ್ಕಡ ನಿವಾಸಿ ಲಕ್ಷ್ಮೀ ಎಂಬವರ ಮಗ ನಾಗೇಂದ್ರ (14) ಮೃತ ಬಾಲಕ. ನಾಗೇಂದ್ರ ಕೋಟ ವಿವೇಕ ಹೈಸ್ಕೂಲಿನಲ್ಲಿ 9 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ. ನಾಗೇಂದ್ರನ ತಾಯಿ ಲಕ್ಷ್ಮೀ ಕಾರ್ಕಡದಲ್ಲಿ ಕ್ಯಾಂಟಿನ್ ನಡೆಸುತ್ತಿದ್ದರು. ಶಾಲೆಗೆ ರಜೆ ಹಿನ್ನಲೆ ನಾಗೇಂದ್ರ ಕಾರ್ಕಡದ ಶಾಲಾ ಮೈದಾನದಲ್ಲಿ ಆಡಲು ಹೋಗಿದ್ದು, ಮಧ್ಯಾಹ್ನ ಊಟಕ್ಕೆಂದು ಬಂದವನು ತಾಯಿಗೆ ಊಟ ಬಡಿಸಲು ಹೇಳಿದ್ದಾನೆ.
ತಾಯಿ ಲಕ್ಷ್ಮೀ ಕ್ಯಾಂಟಿನ್ ನಲ್ಲಿ ಗ್ರಾಹಕರು ಇದ್ದ ಕಾರಣ ಮನೆಗೆ ಹೋಗಿ ಊಟ ಮಾಡಲು ಹೇಳಿದ್ದಾರೆ. ಇದರಿಂದ ಕೋಪಗೊಂಡ ನಾಗೇಂದ್ರ ಮನೆಯಲ್ಲಿ ಬಟ್ಟೆ ಒಣಗಿಸಲು ಕಟ್ಟಿದ್ದ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










