ತಿರುಪತಿ ಕಾಲ್ತುಳಿತ ಪ್ರಕರಣ: ಕರ್ನಾಟಕದ ಭಕ್ತರು ಯಾರೂ ಸಾವನ್ನಪ್ಪಿಲ್ಲ, ಸಚಿವ ರಾಮಲಿಂಗಾರೆಡ್ಡಿ.

23

ಬೆಂಗಳೂರು: ತಿರುಪತಿ ತಿರುಮಲದಲ್ಲಿ ಕಾಲ್ತುಳಿತದಿಂದ ಆರು ಮಂದಿ ಭಕ್ತರ ದಾರುಣ ಸಾವು ಸಂಭವಿಸಿದೆ. ಈ ವಿಚಾರವಾಗಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು, ನಾಳೆ ವೈಕುಂಠ ಏಕಾದಶಿ ಇರುವುದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಹೋಗಿದ್ದಾರೆ. ತಿಮ್ಮಪ್ಪನ ದರ್ಶನಕ್ಕೆ ಹೆಚ್ಚಿನ ಭಕ್ತರು ಹೋಗಿದ್ದರಿಂದ ಈ ದುರಂತ ಘಟನೆ ನಡೆದಿದೆ. ಈ ದುರಂತದ ಘಟನೆ ಕುರಿತು ನಮ್ಮ ಕಾರ್ಯನಿರ್ವಾಹಕ ಅಧಿಕಾರಿಯವರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಕರ್ನಾಟಕದಿಂದ ಹೋಗಿರುವ ಭಕ್ತರಿಗೆ ಯಾವುದೇ ತೊಂದರೆ ಆಗಿಲ್ಲ. ಭಕ್ತರಿಗೆ ಮೂಲ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕರ್ನಾಟಕದ ಭಕ್ತರು ಯಾರೂ ಸಾಮನ್ನಪ್ಪಿಲ್ಲ ಅಂತಾ ಕಾರ್ಯನಿರ್ವಾಹಕ ಅಧಿಕಾರಿಯವರು ತಿಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಆಡಳಿತ ಮಂಡಳಿ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ತಿಳಿಸಿದ್ದಾರೆ.