ತುಂಗಭದ್ರಾ ಡ್ಯಾಂ ಭರ್ತಿ- ವಿದ್ಯುತ್ ದೀಪಗಳ ಅಂಲಕಾರದಿಂದ ಕಂಗೊಳಿಸುತ್ತಿದೆ ಜಲಾಶಯ!

85
firstsuddi

ಕೊಪ್ಪಳ : ಭಾರೀ ಮಳೆಯಿಂದಾಗಿ ಜಿಲ್ಲೆಯ ಮುನಿರಾಬಾದ್ ತಾಲೂಕಿನಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ವಿದ್ಯುತ್ ದೀಪಗಳ ಅಂಲಕಾರದಿಂದ ಕಂಗೊಳಿಸುತ್ತಿದೆ.

ಜಲಾಶಯ ಭರ್ತಿ ಆಗಿರುವ ಹಿನ್ನೆಲೆ 33 ಕ್ರಸ್ಟ್ ಗೇಟ್ ಗಳ ಮೂಲಕ ನೀರನ್ನು ನದಿಗೆ ಬಿಡಲಾಗುತ್ತಿದೆ. ಕ್ರಸ್ಟ್ ಗೇಟ್ ಗಳು ಸೇರಿದಂತೆ ಜಲಾಶಯದಲ್ಲಿ ಈಗ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಕ್ರಸ್ಟ್ ಗೇಟ್ ಮೂಲಕ ಧುಮ್ಮುಕ್ಕುವ ಜಲಧಾರೆಯನ್ನು ನೋಡಲು ನೂರಾರು ಜನ ಜಲಾಶಯಕ್ಕೆ ಆಗಮಿಸಿ ತುಂಗಭದ್ರೆಯ ಚೆಲುವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.