ತೆಲಂಗಾಣದ ಮಹೀಂದ್ರಾ ವಿಶ್ವವಿದ್ಯಾಲಯದಲ್ಲಿ 30 ಮಂದಿಗೆ ಕೋವಿಡ್ ಸೋಂಕು…

67
firstsuddi

ಹೈದರಾಬಾದ್ : ತೆಲಂಗಾಣದ ಮೇಡ್ಚಲ್-ಮಲ್ಕಾಜ್‍ಗಿರಿ ಜಿಲ್ಲೆಯ ಮಹೀಂದ್ರಾ ವಿಶ್ವವಿದ್ಯಾಲಯದಲ್ಲಿ 30 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸದ್ಯ ವಿಶ್ವವಿದ್ಯಾಲಯಕ್ಕೆ ಲಾಕ್​ಡೌನ್​ ಹೇರಲಾಗಿದೆ ಎಂದು ಜಿಲ್ಲಾ ಉಪ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

ಒಟ್ಟು 30 ಕೊರೊನಾ ಸೋಂಕಿತರಲ್ಲಿ 25 ಮಂದಿ ವಿದ್ಯಾರ್ಥಿಗಳಾಗಿದ್ದು, ಉಳಿದ ಐವರು ಶಿಕ್ಷಕರಾಗಿದ್ದಾರೆ. ಆದರೆ ಯಾರಲ್ಲಿಯೂ ಗಂಭೀರವಾದಂತಹ ರೋಗಲಕ್ಷಣಗಳು ಕಂಡು ಬಂದಿಲ್ಲ ಎಂದು ಹೇಳಲಾಗುತ್ತದೆ.

ಮಹೀಂದ್ರಾ ವಿಶ್ವವಿದ್ಯಾಲಯದ ಎಲ್ಲಾ 1,700 ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಮನೆಯಲ್ಲಿಯೇ ಕ್ವಾರೆಂಟೈನ್ ನಲ್ಲಿ ಇರುವಂತೆ ತಿಳಿಸಲಾಗಿದೆ. ಮತ್ತು ಎಲ್ಲರಿಗೂ ಸಂಪೂರ್ಣ ಲಸಿಕೆ ನೀಡಲಾಗಿದೆ. ಕೊರೊನಾ ಸೋಂಕು ದೃಢಪಟ್ಟ ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊರೊನಾ ವೈರಸ್ ಗೆ ಒಳಗಾದವರು ಎರಡೂ ಡೋಸ್ ವ್ಯಾಕ್ಸಿನ್ ಆದವರೇ ಆಗಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ಯೂನಿವರ್ಸಿಟಿಯಲ್ಲಿ ಕ್ಲಾಸ್ ಗಳು ಮುಂದುವರಿಯಲಿವೆ ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.