ದಯವಿಟ್ಟು ಮನೆಯಿಂದ ಯಾರೂ ಹೊರ ಬರಬೇಡಿ-ಇಟಲಿಯಿಂದ ಕನ್ನಡತಿ ಸಂದೇಶ…

609
firstsuddi

ಇಟಲಿ : ಕೊರೊನಾ ವೈರಸ್ ತಡೆಗೆ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಇಡೀ ಭಾರತವನ್ನೇ ಲಾಕ್‍ಡೌನ್ ಮಾಡಿದ್ದು, ಈ ಹಿನ್ನೆಲೆ, ಇಟಲಿಯಿಂದ ಮೈಸೂರು ಮೂಲದ ಯುವತಿ ಭಾರತೀಯರಿಗೆ ಮನೆಯಿಂದ ಲಾಕ್‍ಡೌನ್ ಅನ್ನು ಮೀರಿ ಯಾರೂ ಹೊರ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮೈಸೂರು ಮೂಲದ ಅನುಶ್ರೀ ಎಂಬುವವರು ಇಟಲಿಯಲ್ಲಿ ನೆಲೆಸಿದ್ದು, ಇಟಲಿಯಿಂದಲೇ ವೀಡಿಯೋ ಸಂದೇಶ ಮೂಲಕ ಕೊರೊನಾ ವೈರಸ್ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ಇಟಲಿಯಿಂದ ಮಾತನಾಡುತ್ತಿದ್ದೇನೆ. ಕೊರೊನಾ ವೈರಸ್ ಇಡೀ ವಿಶ್ವಾಧ್ಯಂತ ವ್ಯಾಪಕವಾಗಿ ಹರಡಿ ಸಾವಿರಾರು ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ಸಾವಿರಾರು ಜನರು ಆಸ್ಪತ್ರಗೆ ದಾಖಲಾಗಿದ್ದಾರೆ. ಅದರಲ್ಲಿ ಇಟಲಿ ಕೂಡಾ ಟಾಪ್ ಲಿಸ್ಟ್‍ನಲ್ಲಿ ಇದೆ. ಇಟಲಿಯಲ್ಲಿ 6 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಕೊರೊನಾ ವೈರಸ್ ಇಟಲಿಯಲ್ಲಿ ಮೊದಲು ಇಟಲಿಯ ಮಿಲನ್‍ನಲ್ಲಿ ಕಾಣಿಸಿಕೊಂಡಿತ್ತು. ಕೊರೊನಾ ವೈರಸ್ ಪತ್ತೆಯಾದ 1 ವಾರದ ಬಳಿಕ ಇಟಲಿ ಸರ್ಕಾರ ಸಂಪೂರ್ಣ ಲಾಕ್‍ಡೌನ್ ಮಾಡಿತ್ತು. ಆದರೆ ಸಾರ್ವಜನಿಕರು ಲಾಕ್‍ಡೌನ್ ಅವನ್ನು ಲೆಕ್ಕಿಸದೆ ಮನೆಯಿಂದ ಹೊರಗೆ, ಬೇರೆ ಊರುಗಳಿಗೆ ತಿರುಗಾಡಲು ಆರಂಭಿಸಿದ್ದರು. ಹೀಗಾಗಿ ಈ ಕೊರೊನಾ ವೈರಸ್ ಇಡೀ ಇಟಲಿ ದೇಶದಾದ್ಯಂತ ವ್ಯಾಪಿಸಿದೆ. ಇಟಲಿಯಲ್ಲಿ ಎರಡನೇ ವಾರ ವೈರಸ್ ಇದ್ದಾರೆ 245 ಪ್ರಕರಣ ಇತ್ತು. ಈಗ ಇದೇ ಪರಿರ್ಸತಿಯಲ್ಲಿ ಭಾರತ ಕೂಡಾ ಇದೆ. ಭಾರತದಲ್ಲಿ ಕೊರೊನಾ ವೈರಸ್ ಬಂದು 2 ವಾರ ಆಗಿದೆ. ಇಲ್ಲಿಯವರೆಗೂ 511 ಪಾಸಿಟಿವ್ ಪ್ರಕರಣ ದಾಖಲಾಗಿವೆ. ಹೀಗಾಗಿ ದಯವಿಟ್ಟು ಯಾರೂ ಮನೆಯಿಂದ ಹೊರಗೆ ಬರಬೇಡಿ, ಎಲ್ಲೂ ಹೋಗಬೇಡಿ, ನಮ್ಮ ಭಾರತ ಇನ್ನೊಂದು ಇಟಲಿ ಆಗುವುದು ಬೇಡ.
ಇಟಲಿ ಒಂದು ಸಣ್ಣ ದೇಶ ಸುಮಾರು 6.5 ಕೋಟಿ ಜನಸಂಖ್ಯೆ ಇದೆ. ಆದರೆ ಭಾರತದಲ್ಲಿ 1.3 ಬಿಲಿಯನ್ ಜನಸಂಖ್ಯೆ ಇದೆ. ಹೀಗಾಗಿ ದಯವಿಟ್ಟು ಮನೆಯಿಂದ ಹೊರಗೆ ಬರುವ ಮುನ್ನ ಯೋಚನೆ ಮಾಡಿ. ನಮ್ಮಿಂಸ ನಮ್ಮ ದೇಶದ ಜನರಿಗೆ ತೊಂದರೆ ಆಗುವುದು ಬೇಡ. ನಾನು ಕೂಡಾ ಭಾರತಕ್ಕೆ ಬರಬಹುದು. ನಾನು ಕಳೆದ ಒಂದು ತಿಳಗಳಿನಿಂದ ಮನೆಯಲ್ಲೇ ಇದ್ದೇನೆ. ನನಗೆ ಯಾವುದೇ ಕೊರೊನಾ ಲಕ್ಷಣಗಳು ಇಲ್ಲ. ಈ ನಾನು ಭಾರತಕ್ಕೆ ಬರುವಾಗ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಅಲ್ಲದೇ ನಾನು ಬಂದ ಬಳಿಕ 14 ದಿನ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು. ಆಗ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ತಗುಲುತ್ತದೆ. ಹೀಗಾಗಿ ನಾನು ಭಾರತಕ್ಕೆ ಬರುತ್ತಿಲ್ಲ. ದಯವಿಟ್ಟು ಯಾರೂ ಮನೆಯಿಂದ ಹೊರಗೆ ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.