ಚಿಕ್ಕಮಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಅಲರ್ಟ್ ಆಗಿರುವ ಜಿಲ್ಲಾ ಪೊಲೀಸರು ತಾಲೂಕಿನ ದೇವರಹಳ್ಳಿ ಬಳಿ ಒಂದು ಲಾರಿ ಲೋಡ್ ಬಿಯರ್ ಹಾಗೂ 6250ಲೀ. ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. 2,50,000 ಮೌಲ್ಯದ ಜೀನ್ಸ್ ಪ್ಯಾಂಟ್ ಹಾಗೂ ದಾಖಲೆ ಇಲ್ಲದ 2,80,000 ಹಣವನ್ನು ಕೊಪ್ಪ ತಾಲೂಕಿನ ಗಡಿಕಲ್ ಚೆಕ್‍ಪೋಸ್ಟ್ ನಲ್ಲಿ ಪರೀಶಿಲನೆ ನಡೆಸಿದಾಗ ಸೂಕ್ತ ದಾಖಲೆ ಇಲ್ಲದ ಹಿನ್ನಲೆ ವಶಪಡಿಸಿಕೊಂಡು ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.










