ದಾರದಹಳ್ಳಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಲ್ಯಾಬ್ ಉದ್ಘಾಟನೆ…

159

 

ಮೂಡಿಗೆರೆ : ಇಲ್ಲಿನ ದಾರದಹಳ್ಳಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಲ್ಯಾಬ್ ನ್ನು ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಬಿ. ಜಯಪ್ರಕಾಶ್ ಉದ್ಘಾಟಿಸಿದರು .

ಇದೇ ಶಾಲೆಯಲ್ಲಿ 13ವರ್ಷಗಳಿಂದ ಇಂಗ್ಲಿಷ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೀನಾ ಸಿ.ಜಿ.ಎಂಬುವವರು ತನ್ನ ಸ್ವಂತ ಖರ್ಚಿನಿಂದ ಇಂಗ್ಲಿಷ್ ಲ್ಯಾಬ್ ಪ್ರಾರಂಭಿಸಿದ್ದು ಈ ಬಗ್ಗೆ ಮಾತನಾಡಿದ ಅವರು ನಮ್ಮ ಶಾಲೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿದ್ದು

ಇಂಗ್ಲಿಷ್‌ ಭಾಷೆ ಎಂದರೆ ಕಬ್ಬಿಣದ ಕಡಲೆಯೇ ಸರಿ. ರಾಜ್ಯದ ಬಹುತೇಕ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ವಿದ್ಯಾರ್ಥಿಗಳು ಮೂಲತಃ ಕನ್ನಡ ಮಾಧ್ಯಮದವರಾಗಿದ್ದು, ಇವರಿಗೆ ‘ಇಂಗ್ಲಿಷ್‌ ಗುಮ್ಮ’ ಸದಾ ಕಾಡುತ್ತದೆ.ಇದರಿಂದ ಪದವಿ ತರಗತಿಗಳಲ್ಲಿ ಇಂಗ್ಲಿಷ್‌ ವಿಷಯದಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ಅತಿಹೆಚ್ಚು. ಇತರೆ ವಿಷಯಗಳಲ್ಲಿ ಉತ್ತಮ ಅಂಕಗಳು ಲಭಿಸಿದ್ದರೂ, ಇಂಗ್ಲಿಷ್‌ನಲ್ಲಿ ಅನುತ್ತೀರ್ಣರಾದ ಕಾರಣ ಕಾಲೇಜನ್ನು ಅರ್ಧಕ್ಕೆ ಬಿಟ್ಟವರ ಸಂಖ್ಯೆ ಸಹ ಜಾಸ್ತಿಯಿದೆ. ಈ ಎಲ್ಲಾ ಸಮಸ್ಯೆ ಪರಿಹಾರಕ್ಕಾಗಿ ಇಂಗ್ಲಿಷ್‌ ಭಾಷಾ ಪ್ರಯೋಗಾಲಯವನ್ನು ನಮ್ಮ ಮುಖ್ಯ ಉಪಾಧ್ಯಾಯರಾದ ಬಸವಕುಮಾರ ಅವರ ಮಾರ್ಗದರ್ಶನದಂತೆ ಮಾಡಿದ್ದೇನೆ . ಇನ್ನೂ ಕಂಪ್ಯೂಟರ್ ಅವಶ್ಯಕತೆಯಿದೆ ಯಾರಾದರೂ ದಾನಿಗಳು ನೀಡಿದಲ್ಲಿ ಇನ್ನಷ್ಟು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ,ವಿಎಸ್ ಎಸ್ ಬಿಎನ್ ನಿರ್ದೇಶಕ ದಾರದಹಳ್ಳಿ ಸಂದೀಪ್,ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ರಾಜ್ ,ಗ್ರಾಮ ಪಂಚಾಯತಿ ಸದಸ್ಯರುಗಳಾದ ಸಿದ್ದೇಶ್ ,ವಿಕ್ರಂ ,ಸಾಧನ ಶಿಕ್ಷಕರುಗಳಾದ ಲಾವಣ್ಯ ,ಆಶಾ ,ಅನಂತ್,ಮಂಜು ನಾಯ್ಕ್ ,ಲತಾ ,ತಿಮ್ಮಪ್ಪ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬ್ರಿಜೇಶ್ ಕಡಿದಾಳ್ ಸೇರಿದಂತೆ ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.