ದಾಳಿಗೆ ಸಂಚು ರೂಪಿಸಿದ ಇಬ್ಬರು ಉಗ್ರರ ಬಂಧನ-ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ…

120
firstsuddi

ಶ್ರೀನಗರ : ದಾಳಿಗೆ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನು ಭಾರತೀಯ ಯೋಧರು ಬಂಧಿಸಿದ್ದಾರೆ. ಜಮ್ಮು ಕಾಶ್ಮೀರಾದ ಕುಲ್ಗಾಂ ಜಿಲ್ಲೆಯ ಖಾಜಿಗುಂಡ್ ಗ್ರಾಮದ ಜವಾಹರ್ ಟನಲ್ ಏರಿಯಾದಲ್ಲಿ ಉಗ್ರರನ್ನು ಬಂಧಿಸಲಾಗಿದೆ. ಬಂಧಿತ ಉಗ್ರರನ್ನು ಚೋಟಿಪೋರಾ ಶೋಪಿಯಾನ್ ನ ಬಿಲಾಲ್ ಅಹ್ಮದ್ ಕುಟ್ಟೆ ಹಾಗೂ ಶನವಾಜ್ ಅಹ್ಮದ್ ಮೀರ್ ಎಂದು ಗುರುತಿಸಲಾಗಿದೆ. ಶಂಕಿತ ಉಗ್ರರು ಜಮ್ಮುವಿನಿಂದ ಕಾಶ್ಮೀರಾದತ್ತ ಟ್ರಕ್‍ನಲ್ಲಿ ತೆರಳುತ್ತಿದ್ದರು. ಈ ವೇಳೆ ಯೋಧರು ಟ್ರಕ್ ಅನ್ನು ತಡೆದು ತಪಾಸಣೆ ನಡೆಸಿದಾಗ ಟ್ರಕ್‍ನಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.