ನವದೆಹಲಿ : ಕೇಂದ್ರ ಸರ್ಕಾರದಿಂದ ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ಸಿಕ್ಕಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಉದ್ಯೋಗ ಸೃಷ್ಠಿಗಾಗಿ ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಅರ್ಥವ್ಯವಸ್ಥೆ ಸುಧಾರಣೆಯತ್ತ ಸಾಗುತ್ತಿದೆ. ಈ.ಎಸ್.ಟಿ ಸಂಗ್ರಹ ಶೇ. 10ರಷ್ಟು ಏರಿಕೆಯಾಗಿದ್ದು, 1.05 ಲಕ್ಷ ಕೋಟಿ ರೂ. ಅಧಿಕವಾಗಿದೆ. ದೇಶಿಯ ಉತ್ಪನ್ನಗಳ: ಉತ್ಪಾದನೆ ಹೆಚ್ಚಿಸುವ ಸಲುವಾಗಿ 10 ಕ್ಷೇತ್ರಗಳಿಗೆ 2 ಲಕ್ಷ ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಗಿದೆ. ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆಯಿಂದಾಗಿ ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಹಲವರು ಉದ್ಯೋಗವನ್ನು ಕಳೆದುಕೊಂಡಿದ್ದು, ಅಕ್ಟೋಬರ್ 1ರಿಂದ ಹೊಸ ನೌಕರಿ ಮಾಡುತ್ತಿರುವ ಉದ್ಯೋಗಿಗಳು ಮುಂದಿನ ಎರಡು ವರ್ಷ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಸರ್ಕಾರ ಈ ಯೋಜನೆಗಾಗಿ ಸಬ್ಸಿಡಿ ಘೋಷಿಸಿದೆ. ಮೊದಲ ಪ್ಯಾಕೇಜ್ ನಲ್ಲಿ ಜಾರಿಗೆ ತರಲಾಗಿದ್ದ ಎಮೆರ್ಜಿನ್ಸಿ ಕ್ರೆಡಿಟ್ ಲೈನ್ ಗ್ಯಾರೆಂಟಿ ಸ್ಕೀಮ್ ನ್ನು ಮಾರ್ಚ್ 31, 2021ರವರಗೆ ವಿಸ್ತರಿಸಲಾಗಿದೆ. ನಗರ ಪಿಎಂ ಆವಾಸ್ ಯೋಜನೆಯಡಿ 18 ಸಾವಿರ ಕೋಟಿ ವೆಚ್ಚದಲ್ಲಿ 18 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಗಾಗಿ 1.83 ಕೋಟಿ ಮನವಿಗಳು ಬಂದಿದ್ದು, 1.57 ಕೋಟಿ ರೈ ತರಿಗೆ ಈಗಾಗಲೇ ಕಾರ್ಡ್ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.










