ದುಬೈನಲ್ಲಿ ಬಸ್ ಅಪಘಾತ 8 ಮಂದಿ ಭಾರತೀಯರು ಸೇರಿ 17 ಮಂದಿ ಸಾವು…

179
firstsuddi

ದುಬೈ : ಓಮನ್ ನಿಂದ ದುಬೈಗೆ ಸಂಚರಿಸುತ್ತಿದ್ದ ಬಸ್ ಅಪಘಾತವಾಗಿ 8 ಜನ ಭಾರತೀಯರು ಸೇರಿದಂತೆ 17ಜನರು ಮೃತಪಟ್ಟಿರುವ ಘಟನೆ ದುಬೈನಲ್ಲಿ ನಡೆದಿದ್ದು, ಓಮನ್‍ನಿಂದ ದುಬೈಗೆ ತೆರಳುವಾಗ ಸೂಚನಫಲಕಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದ್ದು, 17 ಮಂದಿ ಮೃತಪಟ್ಟು 5 ಮಂದಿ ಗಾಯಗೊಂಡಿದ್ದಾರೆ. ಮೃತ ಭಾರತೀಯರನ್ನು ರಾಜಗೋಪಾಲನ್, ಫೆರೋಜ್ ಖಾನ್ ಪಠಾಣ್, ರೇಶ್ಮಾ ಫೆರೊಜ್ ಖಾನ್ ಪಠಾಣ್, ದೀಪಕ್ ಕುಮಾರ್, ಜಮಾಲುದ್ದೀನ್ ಅರಕ್ಕವೀಟ್ಟಿಲ್, ಕಿರಣ್ ಜಾನ್ನಿ, ವಾಸುದೇವ್ ಮತ್ತು ತಿಲಕ್ರಾಮ್ ಜವಾಹರ್ ಠಾಕೂರ್ ಎಂದು ಭಾರತೀಯ ರಾಯಬಾರಿ ಕಚೇರಿ ತಿಳಿಸಿದೆ. ಈ ಘಟನೆ ಸಂಭವಿಸುತ್ತಿದ್ದಂತೆ ದುಬೈ ಪೊಲೀಸರು ಗಾಯಾಳುಗಳನ್ನು ರಶೀದ್ ಆಸ್ಪತ್ರೆಗೆ ದಾಖಲಿಸಿದ್ದಾರೆ.