ನವದೆಹಲಿ : ದೆಹಲಿ ಸರ್ಕಾರ 2021-22ರ ಹೊಸ ಅಬಕಾರಿ ನೀತಿಯನ್ನು ಪ್ರಕಟಿಸಿದ್ದು, ಇದು ರಾಷ್ಟ್ರ ರಾಜಧಾನಿಯಲ್ಲಿನ ಹೋಟೆಲ್ ಗಳು, ಕ್ಲಬ್ ಗಳು ಮತ್ತು ರೆಸ್ಟೋರೆಂಟ್ ಗಳಲ್ಲಿನ ಬಾರ್ ಗಳನ್ನು ಬೆಳಗಿನ ಜಾವ 3 ಗಂಟೆಯವರೆಗೆ ತೆರೆಯಲು ಅನುಮತಿ ನೀಡಿದೆ.
ದೆಹಲಿ ಸರ್ಕಾರವು ನಗರದಲ್ಲಿ ವಿಂಗಡಿಸಿರುವ 32 ವಲಯಗಳಲ್ಲಿ ಎಲ್-7ವಿ(ಭಾರತೀಯ ಮತ್ತು ವಿದೇಶಿ ಮದ್ಯ)ಪರವಾನಗಿಗಳಿಗೆ ಟೆಂಡರ್ ನೀಡಿದೆ. ದೆಹಲಿಯ ಹೋಟೆಲ್ ಗಳು, ಕ್ಲಬ್ ಗಳು ಮತ್ತು ರೆಸ್ಟೋರೆಂಟ್ ಗಳಿಗೆ ಟೆರೇಸ್, ಬಾಲ್ಕನಿ ಸೇರಿದಂತೆ ಪರವಾನಿಗೆ ಪಡೆದ ಆವರಣದೊಳಗಿನ ಯಾವುದೇ ಪ್ರದೇಶದಲ್ಲಿ ಭಾರತೀಯ ಅಥವಾ ವಿದೇಶಿ ಮದ್ಯವನ್ನು ಪೂರೈಸಲು ಸರ್ಕಾರ ಅನುಮತಿ ನೀಡಿದೆ. ಜೊತೆಗೆ ಯಾವುದೇ ಮಾರುಕಟ್ಟೆ, ಮಾಲ್, ಶಾಪಿಂಗ್ ಸ್ಟ್ರೀಟ್, ಸ್ಥಳೀಯ ಶಾಪಿಂಗ್ ಸಂಕೀರ್ಣ ಮತ್ತು ಇತರ ಸ್ಥಳಗಳಲ್ಲಿ ಎಲ್-7ವಿ (ಭಾರತೀಯ ಮತ್ತು ವಿದೇಶಿ ಮದ್ಯ) ರೂಪದಲ್ಲಿ ಚಿಲ್ಲರೆ ಮಾರಾಟವನ್ನು ತೆರೆಯಬಹುದಾಗಿದೆ.










