ದೆಹಲಿಯಲ್ಲಿಂದು ಕರ್ತವ್ಯ ಪಥ ಉದ್ಘಾಟಿಸಲಿದ್ದಾರೆ ಮೋದಿ.

50
firstsuddi

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ ಹೊಸದಾಗಿ ನಾಮಕರಣಗೊಂಡ ಕರ್ತವ್ಯ ಪಥವನ್ನು ಉದ್ಘಾಟಿಸಲಿದ್ದಾರೆ. ಇಂದು ಸಂಜೆ ಏಳು ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅವರು ಅನಾವರಣಗೊಳಿಸಲಿದ್ದಾರೆ. ಇದು 28 ಅಡಿ ಉದ್ದ ಮತ್ತು 65 ಮೆಟ್ರಿಕ್ ಟನ್ ಭಾರವಾಗಿದೆ.

ಸ್ವತಂತ್ರ ಪೂರ್ವಕ್ಕೂ ಮುನ್ನ ಕಿಂಗ್ಸ್ ವೇ ಆಗಿದ್ದ ಈ ರಸ್ತೆಯನ್ನು ಸ್ವಾತಂತ್ರ್ಯದ ಬಳಿಕ ರಾಜಪಥ ಎಂದು ನಾಮಕರಣ ಮಾಡಲಾಗಿತ್ತು. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಿ ಅದಕ್ಕೆ ಕರ್ತವ್ಯ ಪಥ ಎಂದು ನರೇಂದ್ರ ಮೋದಿ ಸರ್ಕಾರ ಮರು ನಾಮಕರಣ ಮಾಡಿದೆ.

ದೆಹಲಿಯ ಅತ್ಯಂತ ಜನಪ್ರಿಯ ಸಾರ್ವಜನಿಕ ಸ್ಥಳಗಳಲ್ಲಿ ರಾಜಪಥವೂ ಒಂದು. ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಕೇಂದ್ರ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ಪೂರ್ಣಗೊಂಡ ಮೊದಲ ಯೋಜನೆ ಇದಾಗಿದೆ. ಪುನರಾಭಿವೃದ್ಧಿ ಮಾಡಲಾದ ಈ ಸ್ಥಳಕ್ಕೆ ಕರ್ತವ್ಯಪಥ ಎಂದು ಹೆಸರಿಡಲಾಗಿದೆ. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಈ ಪ್ರದೇಶದಲ್ಲಿ ಕುಡಿಯುವ ನೀರು, ಪಾರ್ಕಿಂಗ್, ಶೌಚಾಲಯ ಸೇರಿ ಹಲವು ಮೂಲಭೂತ ಸೌಕರ್ಯಗಳ ಕೊರತೆ ಇತ್ತು, ಇದನ್ನು ಈಗ ಅಭಿವೃದ್ಧಿಪಡಿಸಲಾಗಿದೆ.

ಒಟ್ಟು 19 ಎಕರೆ ಭೂ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ, ರಸ್ತೆಯ ಎರಡು ಬದಿಯಲ್ಲಿರುವ ಹಸಿರು ಹೊದಿಕೆಯ ಆಸನ 3.5 ಲಕ್ಷ ಚದರ ಮೀಟರ್ಗಳಿಂದ 3.9 ಲಕ್ಷ ಚದರ ಮೀಟರ್ ಗೆ ಹೆಚ್ಚಿಸಿದೆ, ಗಣರಾಜ್ಯೋತ್ಸವದ ಪರೇಡ್ ಅನುಕೂಲವಾಗುವಂತೆ ಸ್ಥಳಾವಕಾಶ ಹೆಚ್ಚಿಸಿದೆ, ವಿಶೇಷ ಹಾಸನದ ವ್ಯವಸ್ಥೆಯೂ ಮಾಡಲಾಗಿದೆ. 1225 ವಾಹನಗಳು, 40 ಬಸ್‍ಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ರಸ್ತೆ ಉದ್ದಕ್ಕೂ 40 ಮಾರಾಟ ಮಳಿಗೆಗಳನ್ನು ನಿರ್ಮಿಸಿದ್ದು, ರಾಜ್ಯವಾರು ವಿಶೇಷತೆ ಆದ್ಯತೆ ನೀಡಿದೆ.