ನವದೆಹಲಿ : ರಾಷ್ಟ್ರ ರಾಜಧಾನಿಯ ಗೋಕುಲಪುರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸುಮಾರು 60 ಗುಡಿಸಲುಗಳು ಸುಟ್ಟುಕರಕಲಾಗಿವೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಗ್ನಿ ಶಾಮಕ ಇಲಾಖೆ ಮಾಹಿತಿ ನೀಡಿದೆ.
ಘಟನೆ ನಡೆದಾಕ್ಷಣ ನಾವು ಕಾರ್ಯಪ್ರವೃತ್ತರಾಗಿದ್ದು, ಸ್ಥಳಕ್ಕೆ ತಲುಪಿದ್ದೆವು. ಜೊತೆಗೆ ಅಗ್ನಿ ಶಾಮಕದಳದವರನ್ನು ಸಂಪರ್ಕಿಸಿದ್ದೇವೆ. ಅವರು ಕೂಡ ಉತ್ತಮಾಗಿ ಸ್ಪಂದನೆ ನೀಡಿದ್ದಾರೆ. ಬೆಂಕಿಯನ್ನು ಸುಮಾರು 4 ಗಂಟೆ ವೇಳೆಗೆ ನಂದಿಸಿದ್ದೇವೆ. ಆದರೆ ಅಷ್ಟರಲ್ಲಾಗಲೇ 30 ಗುಡಿಸಲು ಸುಟ್ಟುಹೋಗಿದ್ದು, 7 ಜನರು ಮೃತರಾಗಿದ್ದಾರೆ. ಬೆಂಕಿ ತಗುಲಲು ಕಾರಣವೇನು ಎಂಬುದು ಗೊತ್ತಾಗಿಲ್ಲ. ತನಿಖೆ ಶುರು ಮಾಡಿದ್ದೇವೆ ಎಂದು ದೆಹಲಿ ಈಶಾನ್ಯ ವಲಯ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ದೇವೇಶ್ ಕುಮಾರ್ ತಿಳಿಸಿದ್ದಾರೆ.










