ದೇವರೆ ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರದು : ಯುವತಿಯ ವಿಚಿತ್ರ ಹರಕೆ…

75
firstsuddi

ಚಾಮರಾಜನಗರ : ತಾಲೂಕಿನ ಮುಕ್ಕಡಹಳ್ಳಿ ಮಾಯಮ್ಮ ದೇವಮ್ಮ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಭಕ್ತರೊಬ್ಬರು ಹಾಕಿರುವ ಬೇಡಿಕೆ ಪತ್ರ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.

ದೇವರೇ ನನಗೆ ಹೆಣ್ಣನ್ನು ಕರುಣಿಸು ಎಂದು ಬರೆದಿದ್ದ ಪತ್ರ ಮೊನ್ನೆ ಚಾಮರಾಜನಗರದ ಚಾಮರಾಜೇಶ್ವರನ ಹುಂಡಿಯಲ್ಲಿ ಸಿಕ್ಕಿತ್ತು. ಇದೀಗ ಮುಕ್ಕಡಹಳ್ಳಿ ಮಾಯಮ್ಮ ದೇವಮ್ಮ ದೇವಸ್ಥಾನದ ಹುಂಡಿಯಲ್ಲಿ ಮತ್ತೊಂದು ರೀತಿಯ ಪತ್ರ ದೊರೆತಿದೆ.

ದೇವರೆ ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರದು ಎಂದು ಪ್ರೇಮಿಯೊಬ್ಬಳು ದೇವರಿಕೆ ಹರಕೆ ಕಟ್ಟಿಕೊಂಡು ಹುಂಡಿಗೆ ಚೀಟಿಯನ್ನು ಹಾಕಿದ್ದಾಳೆ. ಪ್ರೇಮಿಯ ಈ ಚೀಟಿ ಹುಂಡಿ ಎಣಿಕೆ ಸಂದರ್ಭದಲ್ಲಿ ಸಿಕ್ಕಿದೆ.