ದೇವಾಲಯದಲ್ಲಿ ಪರಸ್ಪರ ಭೇಟಿಯಾದ ಮೋದಿ, ಯೋಗಿ ಸಹೋದರಿಯರು- ವೀಡಿಯೋ ವೈರಲ್…

58
firstsuddi

ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಹೋದರಿ ಉತ್ತರಾಖಂಡ್ ದೇವಸ್ಥಾನವೊಂದರಲ್ಲಿ ಪರಸ್ಪರ ಭೇಟಿಯಾಗಿದ್ದಾರೆ.

ಉತ್ತರಾಖಂಡದ ಗರ್ವಾಲ್‌ನಲ್ಲಿರುವ ದೇಗುಲದಲ್ಲಿ ಇಬ್ಬರು ಮುಖಾಮುಖಿಯಾಗಿದ್ದಾರೆ. ಇದನ್ನು ಕುಟುಂಬಸ್ಥರು ವೀಡಿಯೋ ಮಾಡಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಪ್ರಧಾನಿ ಮೋದಿ ಅವರ ಸಹೋದರಿ ವಸಂತಿಬೆನ್ ಅವರು ಶ್ರಾವಣ ಮಾಸದ ಪ್ರಯುಕ್ತ ಶಿವನಿಗೆ ಪ್ರಾರ್ಥನೆ ಸಲ್ಲಿಸಲು ಪೌರಿ ಗಡ್ವಾಲ್‌ನಲ್ಲಿರುವ ನೀಲಕಂಠ ಮಹಾದೇವ ದೇವಸ್ಥಾನಕ್ಕೆ ತಮ್ಮ ಪತಿಯೊಂದಿಗೆ ಭೇಟಿ ನೀಡಿದ್ದಾರೆ. ಅಲ್ಲಿಂದ ಅವರು ಕೊಠಾರಿ ಗ್ರಾಮದ ಪಾರ್ವತಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರ ಸಹೋದರಿ ಶಶಿ ದೇವಿ ಅವರನ್ನು ಕಂಡು ಮಾತನಾಡಿಸಿದ್ದಾರೆ.

ವೀಡಿಯೋದಲ್ಲಿ ಇಬ್ಬರೂ ಪರಸ್ಪರ ಆಲಿಂಗನ ಮಾಡಿಕೊಂಡು ಖುಷಿಯ ನಗೆ ಬೀರಿರುವುದನ್ನು ಕಾಣಬಹುದಾಗಿದೆ. ಒಬ್ಬರಿಗೊಬ್ಬರು ಶುಭಾಶಯ ಕೋರಿದ ನಂತರ ಇಬ್ಬರೂ ಪರಸ್ಪರ ಕೈ ಹಿಡಿದು ದೇವಸ್ಥಾನದ ಕಡೆಗೆ ಸಾಗಿದರು.

ದೇಶದ ಇಬ್ಬರು ಪ್ರಮುಖ ನಾಯಕರ ಸಹೋದರಿಯರ ನಡುವಿನ ಭೇಟಿಯು ಸರಳತೆ, ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಸಾರವನ್ನು ಉದಾಹರಿಸುತ್ತದೆ ಎಂದು ಬಿಜೆಪಿ ನಾಯಕ ಅಜಯ್ ನಂದಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.